ಮಡಿಕೇರಿ, ನ. 17: ಕೊರೊನಾ ನಡುವೆಯೂ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಸ್ತಾತಕೋತ್ತರ ಮತ್ತು ಅಂತಿಮ ಪದವಿ ತರಗತಿಗಳನ್ನು ಪ್ರಾರಂಭಿಸಲು ಸರ್ಕಾರ ನಿರ್ದೇಶನ ನೀಡಿರುವ ಹಿನ್ನೆಲೆಯಲ್ಲಿ ಇಂದು ಜಿಲ್ಲೆಯಲ್ಲಿರುವ ಕಾಲೇಜುಗಳಲ್ಲಿ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಆರೋಗ್ಯ ಇಲಾಖೆಯಿಂದ ಕೊರೊನಾ ಪರೀಕ್ಷೆ ಹಮ್ಮಿಕೊಳ್ಳಲಾಯಿತು.ಜಿಲ್ಲಾ ಕೇಂದ್ರ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಮಹಿಳಾ ಕಾಲೇಜುಗಳಲ್ಲಿ ಕೊರೊನಾ ಪರೀಕ್ಷೆ ನಡೆಯಿತು. ಫೀ.ಮಾ. ಕಾರ್ಯಪ್ಪ ಕಾಲೇಜಿನಲ್ಲಿ ಸುಮಾರು 200 ಮಕ್ಕಳು ಹಾಗೂ ಉಪನ್ಯಾಸಕರು ಮತ್ತು ಸಿಬ್ಬಂದಿಗೆ ಕೊರೊನಾ ಪರೀಕ್ಷೆ ಮಾಡ ಲಾಯಿತು. ಈ ಬಗ್ಗೆ ಸುದ್ದಿಗಾರ ರೊಂದಿಗೆ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಜಗತ್ ತಿಮ್ಮಯ್ಯ ಅವರು ಸುಮಾರು 500 ಮಕ್ಕಳಲ್ಲಿ ಇಂದು 200ರಿಂದ 300 ಮಕ್ಕಳು ಆಗಮಿಸಿದ್ದಾರೆ. ಕೊರೊನಾ ಪರೀಕ್ಷೆಗಳು ಮುಗಿದ ಬಳಿಕ ಪಾಠ ಪ್ರವಚನಗಳನ್ನು ಕಾಲೇಜಿನಲ್ಲಿ ಹಾಗೂ ಆನ್‍ಲೈನ್ ಮೂಲಕವೂ ಆರಂಭಿಸ ಲಾಗುತ್ತದೆ ಎಂದು ಹೇಳಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 80 ಮಕ್ಕಳಲ್ಲಿ ಸುಮಾರು 40 ಮಕ್ಕಳು ಕೊರೊನಾ ಪರೀಕ್ಷೆಗೆ ಒಳಪಟ್ಟರು. ಈ ಬಗ್ಗೆ ‘ಶಕ್ತಿ’ಯೊಂದಿಗೆ ಮಾತನಾಡಿದ ಪ್ರಾಂಶುಪಾಲೆ ವೈ. ಚಿತ್ರಾ ಅವರು ಕಾಲೇಜಿನ ಉಪನ್ಯಾಸಕರು ಹಾಗೂ ಸಿಬ್ಬಂದಿಯ ಕೊರೊನಾ ಪರೀಕ್ಷೆಯನ್ನು ಈಗಾಗಲೇ ಮಾಡಲಾಗಿದ್ದು, ಇದೀಗ ವಿದ್ಯಾರ್ಥಿ ಕಾಲೇಜಿನಲ್ಲಿ ಸುಮಾರು 200 ಮಕ್ಕಳು ಹಾಗೂ ಉಪನ್ಯಾಸಕರು ಮತ್ತು ಸಿಬ್ಬಂದಿಗೆ ಕೊರೊನಾ ಪರೀಕ್ಷೆ ಮಾಡ ಲಾಯಿತು. ಈ ಬಗ್ಗೆ ಸುದ್ದಿಗಾರ ರೊಂದಿಗೆ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಜಗತ್ ತಿಮ್ಮಯ್ಯ ಅವರು ಸುಮಾರು 500 ಮಕ್ಕಳಲ್ಲಿ ಇಂದು 200ರಿಂದ 300 ಮಕ್ಕಳು ಆಗಮಿಸಿದ್ದಾರೆ. ಕೊರೊನಾ ಪರೀಕ್ಷೆಗಳು ಮುಗಿದ ಬಳಿಕ ಪಾಠ ಪ್ರವಚನಗಳನ್ನು ಕಾಲೇಜಿನಲ್ಲಿ ಹಾಗೂ ಆನ್‍ಲೈನ್ ಮೂಲಕವೂ ಆರಂಭಿಸ ಲಾಗುತ್ತದೆ ಎಂದು ಹೇಳಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 80 ಮಕ್ಕಳಲ್ಲಿ ಸುಮಾರು 40 ಮಕ್ಕಳು ಕೊರೊನಾ ಪರೀಕ್ಷೆಗೆ ಒಳಪಟ್ಟರು. ಈ ಬಗ್ಗೆ ‘ಶಕ್ತಿ’ಯೊಂದಿಗೆ ಮಾತನಾಡಿದ ಪ್ರಾಂಶುಪಾಲೆ ವೈ. ಚಿತ್ರಾ ಅವರು ಕಾಲೇಜಿನ ಉಪನ್ಯಾಸಕರು ಹಾಗೂ ಸಿಬ್ಬಂದಿಯ ಕೊರೊನಾ ಪರೀಕ್ಷೆಯನ್ನು ಈಗಾಗಲೇ ಮಾಡಲಾಗಿದ್ದು, ಇದೀಗ ವಿದ್ಯಾರ್ಥಿ ಮಗ ಅಥವಾ ಮಗಳಿಗೆ ತಿಳುವಳಿಕೆ ನೀಡಿದ್ದೇನೆ. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದು ಕೊಳ್ಳುವುದು ಇದರ ಜೊತೆ ಒಂದು ವೇಳೆ ಕೊರೊನಾ ಲಕ್ಷಣಗಳು ಕಂಡು ಬಂದರೆ ತರಗತಿ ಪ್ರತಿನಿಧಿ, ಮೇಲ್ವಿ ಚಾರಕರು ಅಥವಾ ಪ್ರಾಂಶುಪಾಲರ ಗಮನಕ್ಕೆ ತರಲು ಮನವರಿಕೆ ಮಾಡಿಸಿದ್ದೇನೆ ಎಂಬುದಾಗಿ ಪೋಷಕರಿಂದ ಒಪ್ಪಿಗೆ ಪತ್ರ ತರುವ ನಿಯಮವನ್ನು ಕೂಡ ಕಾಲೇಜುಗಳಲ್ಲಿ ಪಾಲನೆ ಮಾಡಲಾಗುತ್ತಿದೆ. ಕೊರೊನಾ ಪರೀಕ್ಷಾ ಪ್ರಕ್ರಿಯೆ ಬಗ್ಗೆ ಆರೋಗ್ಯಾಧಿ ಕಾರಿ ಡಾ. ಮೋಹನ್ ಖುದ್ದು ಭೇಡಿ ನೀಡಿ ಪರಿಶೀಲನೆ ನಡೆಸಿದರು. ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಡಾ. ಅಪ್ಪಾಜಿಗೌಡ ಅವರು ಕಾಲೇಜಿಗೆ ಭೇಟಿ ನೀಡಿ ಪರಿಶೀಲಿಸಿದರು.

ವೀರಾಜಪೇಟೆ ವರದಿ

ವೀರಾಜಪೇಟೆಯ ಸರಕಾರಿ ಪದವಿ ಕಾಲೇಜಿನ ಆವರಣದಲ್ಲಿ ಪದವಿ ತರಗತಿಗಳ

(ಮೊದಲ ಪುಟದಿಂದ) ಆರಂಭಕ್ಕಾಗಿ ಬೋಧಕ, ಭೋಧಕೇತರ ಸಿಬ್ಬಂದಿಗಳನ್ನು ಆರೋಗ್ಯ ಇಲಾಖೆ ವತಿಯಿಂದ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಯಿತು. ನಂತರ ಪದವಿ ತರಗತಿಗಳ ವಿದ್ಯಾರ್ಥಿಗಳಿಗೂ ಕೋವಿಡ್ ಪರೀಕ್ಷೆ ನಡೆಯಿತು.

ತರಗತಿಗೆ ಹಾಜರಾಗಲು ಬಂದಿದ್ದ ಎಲ್ಲ ವಿದ್ಯಾರ್ಥಿಗಳ ಕೋವಿಡ್ ಪರೀಕ್ಷೆ ಸೇರಿದಂತೆ ಎಲ್ಲಾ ದಾಖಲೆಗಳನ್ನು ಪರಿಶೀಲಿಸಲಾಯಿತು. ಪೋಷಕರಿಂದಲೂ ಒಪ್ಪಿಗೆ ಪತ್ರ ತರಲು ಎಲ್ಲ ವಿದ್ಯಾರ್ಥಿಗಳಿಗೆ ಮುದ್ರಿತಗೊಂಡ ಫಾರಂನ್ನು ನೀಡಲಾಯಿತು. ನಾಳೆಯಿಂದ ನಿರಂತರವಾಗಿ ವಿವಿಧ ಕೋರ್ಸ್‍ಗಳ ತರಗತಿಗಳನ್ನು ಆರಂಭ ಮಾಡಲಾಗುವುದು, ಕಾಲೇಜಿನಲ್ಲಿ ಸ್ಯಾನಿಟೈಸರ್ ಬಳಕೆ, ಥರ್ಮಲ್ ಸ್ಕ್ರೀನ್, ಮಾಸ್ಕ್ ಬಳಕೆ, ಸಾಮಾಜಿಕ ಅಂತರ ಕಾಪಾಡುವ ಷರತ್ತನ್ನು ಪಾಲಿಸಲಾಗಿದೆ ಎಂದು ಪ್ರಾಂಶುಪಾಲ ಟಿ.ಕೆ. ಬೋಪಯ್ಯ ತಿಳಿಸಿದರು.

ಕಾವೇರಿ ಕಾಲೇಜಿನಲ್ಲಿ ಅಂತಿಮ ಪದವಿಯಲ್ಲಿ 70 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇಂದು ಕೇವಲ 5 ವಿದ್ಯಾರ್ಥಿಗಳು ಕಾಲೇಜಿಗೆ ಹಾಜರಾಗಿದ್ದಾರೆ. ಅವರಲ್ಲಿ ಪೊಷಕರ ಅನುಮತಿ ಪತ್ರ ಇಲ್ಲದ ಕಾರಣ ವಾಪಾಸ್ಸು ಕಳುಹಿಸಲಾಗಿದೆ. ಕಾಲೇಜಿಗೆ ಹಾಜರಾಗದ ವಿದ್ಯಾರ್ಥಿಗಳಿಗೆ ಆನ್‍ಲೈನ್ ಮೂಲಕ ಪಾಠ ಪ್ರವಚನ ನಡೆಸಲಾಗುವುದು. ತಾಲೂಕು ವೈದ್ಯಾಧಿಕಾರಿ ಯತಿರಾಜ್ ತಂಡದಿಂದ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳಿಗೆ ಕೋವಿಡ್ ಪರೀಕ್ಷೆ ನಡೆಸಲಾಗುತ್ತಿದೆ. ನಂತರದ ದಿನಗಳಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೂ ಕೋವಿಡ್ ಪರೀಕ್ಷೆ ಮಾಡಲಾಗುವುದು ಎಂದು ಪ್ರಾಂಶುಪಾಲೆ ಎ.ಎಸ್. ಪೂವಮ್ಮ ತಿಳಿಸಿದ್ದಾರೆ.

ವೀರಾಜಪೇಟೆ ಸಂತ ಅನ್ನಮ್ಮ ಕಾಲೇಜಿನಲ್ಲೂ ಸರಕಾರದ ಆದೇಶದಂತೆ ಬೋಧಕ, ಬೋಧಕೇತರ ಸಿಬ್ಬಂದಿಗಳಿಗೆ ಕೋವಿಡ್ ಪರೀಕ್ಷೆ ಮಾಡಲಾಯಿತು. ನಂತರ ಹಾಜರಾಗಿದ್ದ ಕೇವಲ 10ರಿಂದ 15 ವಿದ್ಯಾರ್ಥಿಗಳಲ್ಲಿ ಕೋವಿಡ್ ಪರೀಕ್ಷೆ ನಡೆಯಿತು.

ಸಂತ ಅನ್ನಮ್ಮ ಪದವಿ ಕಾಲೇಜಿನ ಪದವಿ ತರಗತಿಯ ಸುಮಾರು 250 ವಿದ್ಯಾರ್ಥಿಗಳಿಗೂ ಪದವಿ ತರಗತಿಗಳ ಆರಂಭದ ಕುರಿತು ಆನ್ ಲೈನ್ ಮೆಸೇಜ್ ಮಾಡಲಾಗಿತ್ತು. ಆದರೆ ಇದಕ್ಕೆ ಕೆಲವು ವಿದ್ಯಾರ್ಥಿಗಳು ಮಾತ್ರ ಸ್ಪಂದಿಸಿದ್ದಾರೆ. ಪುನ: ಇಂದು ಪದವಿ ತರಗತಿಗಳ ವಿದ್ಯಾರ್ಥಿಗಳಿಗೆ ಕಾಲೇಜಿಗೆ ಹಾಜರಾಗುವಂತೆ ಮಾಹಿತಿ ನೀಡಲಾಗುವುದು ಎಂದು ಕಾಲೇಜಿನ ಪ್ರಾಂಶುಪಾಲ ರೆ:ಫಾ:ರೋನಿ ರವಿಕುಮಾರ್ ಹೇಳಿದರು.

ಪದವಿ ತರಗತಿಗಳು ಇಂದಿನಿಂದ ಆರಂಭವಾಗಬೇಕಿತ್ತು. ಆದರೆ ಮಕ್ಕಳೆ ಬಾರದೆ ಅದು ಸಾಧ್ಯವಾಗಲಿಲ್ಲ ಎಂದು ಪೆರುಂಬಾಡಿಯ ಷಂಶುಲ್ ಉಲಾಮಾ ಮಹಿಳಾ ಕಾಲೇಜಿನ ಪ್ರಾಂಶುಪಾಲೆ ಭಾನುಮತಿ ತಿಳಿಸಿದರು. ಕಾಲೇಜಿನಲ್ಲಿ ಕೋವಿಡ್ ಪರೀಕ್ಷೆಗೆ ಎಲ್ಲಾ ತಯಾರಿ ನಡೆಸಲಾಗಿತ್ತು. ಸಿಬ್ಬಂದಿಗಳಿಗೆ ಉಚಿತವಾಗಿ ಪರೀಕ್ಷೆ ಮಾಡಲಾಗಿದೆ. ಆದರೆ ಇಂದು ವಿದ್ಯಾರ್ಥಿಗಳು ಕಾಲೇಜಿಗೆ ಆಗಮಿಸಿಲ್ಲ ಎಂದರು.

ಗೋಣಿಕೊಪ್ಪ ವರದಿ

ಗೋಣಿಕೊಪ್ಪಲುವಿನ ಕಾವೇರಿ ಕಾಲೇಜಿನಲ್ಲಿ ಬಿ.ಕಾಂ.ವಿದ್ಯಾರ್ಥಿಗಳು ಹೊರತು ಪಡಿಸಿ ಬಿ.ಎ.ಬಿಸಿಎ,ಬಿಬಿಎ ಹಾಗೂ ಬಿಎಸ್‍ಸಿ ವಿದ್ಯಾರ್ಥಿನಿಯರು ಆಗಮಿಸಿದ್ದರು.

ಕಾಲೇಜಿನ ಗೇಟ್ ಬಳಿಯಲ್ಲಿ ವಿದ್ಯಾರ್ಥಿಗಳು ಪರೀಕ್ಷೆಗೆ ಒಳಪಟ್ಟು ನಂತರ ಮುಖ್ಯ ದ್ವಾರದಲ್ಲಿ ಸ್ಯಾನಿಟೈಸರ್ ಬಳಸಿದ ನಂತರ ಕಾಲೇಜಿನ ಆವರಣದಲ್ಲಿ ಆರೋಗ್ಯ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕೋವಿಡ್ ಪರೀಕ್ಷೆÉ ನಡೆಯಿತು. ಎರಡು ದಿನಗಳ ಹಿಂದೆಯೇ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳಿಗೆ ಕೋವಿಡ್ ಟೆಸ್ಟ್‍ಅನ್ನು ನಡೆಸಲಾಗಿತ್ತು. ಸರ್ಕಾರದ ಆದೇಶವನ್ನು ಪಾಲಿಸುವ ಮೂಲಕ ವಿದ್ಯಾರ್ಥಿಗಳ ಕಲಿಕೆಗೆ ಅವಕಾಶ ಕಲ್ಪಿಸುವುದಾಗಿ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಪ್ರೋ. ಎಂ.ಬಿ.ಕಾವೇರಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.

ಗೋಣಿಕೊಪ್ಪ ಪಂಚಾಯ್ತಿ ವತಿಯಿಂದ ಕಾಲೇಜಿನ ವಿದ್ಯಾರ್ಥಿಗಳ ಕೊಠಡಿಗಳನ್ನು ಸಂಪೂರ್ಣ ಸ್ಯಾನಿಟೈಸ್ ಮಾಡಿಸಲಾಗಿತ್ತು. ತಾಲೂಕು ವೈದ್ಯಾಧಿಕಾರಿ ಡಾ.ಯತಿರಾಜ್ ಕಾಲೇಜಿಗೆ ಆಗಮಿಸಿ ವಿದ್ಯಾರ್ಥಿಗಳಿಗೆ ಕೋವಿಡ್ ಟೆಸ್ಟ್ ಮಾಡಿಸುತ್ತಿರುವ ಬಗ್ಗೆ ಪರಿಶೀಲನೆ ನಡೆಸಿದರು. ನೂರಕ್ಕೂ ಅಧಿಕ ವಿದ್ಯಾರ್ಥಿಗಳು ತಪಾಸಣೆಯಲ್ಲಿ ಪಾಲ್ಗೊಂಡರು. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ವಿದ್ಯಾರ್ಥಿಗಳಿಗೆ ಕೋವಿಡ್ - 19 ನಿಯಮಗಳನ್ನು ಪಾಲಿಸುವಂತೆ ಅಧ್ಯಾಪಕರು ಸೂಚನೆ ನೀಡಿದರು. ಬಿ.ಕಾಂ ವಿದ್ಯಾರ್ಥಿಗಳಿಗೆ ಬುಧವಾರದಂದು ಕೋವಿಡ್ ಪರೀಕ್ಷೆಗಳು ನಡೆಯಲಿವೆ.

ಶನಿವಾರಸಂತೆ

ಇಲ್ಲಿನ ಭಾರತಿ ವಿದ್ಯಾ ಸಂಸ್ಥೆ ಪ್ರಥಮ ದರ್ಜೆ ಕಾಲೇಜಿನ ಎಲ್ಲಾ ಕೊಠಡಿಗಳನ್ನು ಶನಿವಾರಸಂತೆ ಗ್ರಾಮ ಪಂಚಾಯಿತಿ ವತಿಯಿಂದ ಸ್ಯಾನಿಟೈಸ್ ಮಾಡಲಾಯಿತು. ವಿದ್ಯಾರ್ಥಿಗಳ ಸಂಖ್ಯೆ ವಿರಳವಾಗಿತ್ತು. ಹಾಜರಾಗಿದ್ದ ವಿದ್ಯಾರ್ಥಿಗಳಿಗೆ ಹಾಗೂ ಉಪನ್ಯಾಸಕರುಗಳಿಗೆ ಶನಿವಾರಸಂತೆ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಪರೀಕ್ಷೆ ಮಾಡಲಾಯಿತು ಎಂದು ಕಾಲೇಜಿನ ಪ್ರಾಂಶುಪಾಲ ಇ.ಎಂ. ದಯಾನಂದ ಮಾಹಿತಿಯಿತ್ತರು.

ಸೋಮವಾರಪೇಟೆ ವರದಿ

ಸೋಮವಾರಪೇಟೆಯಲ್ಲಿ ಸರ್ಕಾರದ ಆದೇಶದ ಹಿನ್ನೆಲೆ ಇಂದಿನಿಂದ ಅಂತಿಮ ಪದವಿ ತರಗತಿಗಳು ಆರಂಭಗೊಳ್ಳುತ್ತಿದ್ದು, ಕಾಲೇಜು ಕಟ್ಟಡಗಳನ್ನು ಸಂಪೂರ್ಣ ಸ್ಯಾನಿಟೈಸರ್ ಮಾಡಲಾಗುತ್ತಿದೆ.

ಸೋಮವಾರಪೇಟೆಯಲ್ಲಿ ಯಡೂರು ಬಿಟಿಸಿಜಿ ಸರ್ಕಾರಿ ಪದವಿ ಕಾಲೇಜು, ಚಾಣಕ್ಯ ಕಾಲೇಜು ಮತ್ತು ಸಂತ ಜೋಸೆಫರ ಕಾಲೇಜುಗಳಿದ್ದು, ಕೊರೊನಾ ಲಾಕ್‍ಡೌನ್‍ನಿಂದಾಗಿ ಮುಚ್ಚಲ್ಪಟ್ಟಿದ್ದ ಕಾಲೇಜು ಕಟ್ಟಡವನ್ನು ಇದೀಗ ಸಂಪೂರ್ಣ ಸ್ಯಾನಿಟೈಸ್ ಮಾಡಲಾಗುತ್ತಿದೆ.

ಯಡೂರು ಸರ್ಕಾರಿ ಕಾಲೇಜಿನಲ್ಲಿ ಅಂತಿಮ ಬಿ.ಎ. ಮತ್ತು ಬಿ.ಕಾಂ. ತರಗತಿಗಳಲ್ಲಿ 52 ಮಂದಿ ವಿದ್ಯಾರ್ಥಿಗಳಿದ್ದು, ಇವರಲ್ಲಿ 15 ವಿದ್ಯಾರ್ಥಿಗಳು ಪ್ರಥಮ ದಿನದಂದು ಕಾಲೇಜಿಗೆ ಆಗಮಿಸಿದ್ದರು. ಇಂತಹ ವಿದ್ಯಾರ್ಥಿಗಳಿಗೆ ಪೋಷಕರಿಂದ ಒಪ್ಪಿಗೆ ಪತ್ರ ಹಾಗೂ ಕೊರೊನಾ ಪರೀಕ್ಷಾ ವರದಿಯನ್ನು ತಂದು ನಂತರ ತರಗತಿಗಳಿಗೆ ಹಾಜರಾಗುವಂತೆ ತಿಳಿಸಲಾಯಿತು.

ಕೊರೊನಾ ಹಿನ್ನೆಲೆ ಸರ್ಕಾರ ನಿಗದಿಪಡಿಸಿರುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಲಾಗುತ್ತಿದೆ ಎಂದು ಪ್ರಾಂಶುಪಾಲ ರಾಜು ತಿಳಿಸಿದರು.

ಪೋಷಕರ ಒಪ್ಪಿಗೆ ಪತ್ರ, ಕೊರೊನಾ ಪರೀಕ್ಷಾ ವರದಿಯನ್ನು ಕಡ್ಡಾಯಗೊಳಿಸಲಾಗಿದ್ದು, ಅಂತಹ ವಿದ್ಯಾರ್ಥಿಗಳಿಗೆ ಮಾತ್ರ ತರಗತಿ ನಡೆಸಲಾಗುವದು ಎಂದು ರಾಜು ತಿಳಿಸಿದರು.

ತರಗತಿಗಳಲ್ಲಿ ಶೇ. 50ರಷ್ಟು ಹಾಜರಾತಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ಉಳಿದ ವಿದ್ಯಾರ್ಥಿಗಳಿಗೆ ಮತ್ತೊಂದು ಕೊಠಡಿಯಲ್ಲಿ ಉಪನ್ಯಾಸ ನೀಡಲಾಗುವದು. ಕಾಲೇಜಿನಲ್ಲಿ ಸ್ಯಾನಿಟೈಸರ್ ಸ್ಟ್ಯಾಂಡ್ ಅಳವಡಿಸಲಾಗಿದ್ದು, ಕಾಲೇಜಿಗೆ ಆಗಮಿಸುವ ವಿದ್ಯಾರ್ಥಿಗಳಿಗಷ್ಟೇ ತರಗತಿ ನಡೆಸಲಾಗುವದು. ಯಾರನ್ನೂ ಬಲವಂತವಾಗಿ ಹಾಜರಾಗುವಂತೆ ಒತ್ತಡಹಾಕುತ್ತಿಲ್ಲ. ತರಗತಿಗಳಿಗೆ ಹಾಜರಾಗಲು ಅಸಾಧ್ಯವಾಗುವ ವಿದ್ಯಾರ್ಥಿಗಳು ಆನ್‍ಲೈನ್ ತರಗತಿಯಲ್ಲಿ ಭಾಗವಹಿಸಬಹುದು ಎಂದು ಪ್ರಾಂಶುಪಾಲರು ಮಾಹಿತಿ ನೀಡಿದರು.

ವಿದ್ಯಾರ್ಥಿಗಳಿಗೆ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ. ಇದರೊಂದಿಗೆ ಕಾಲೇಜು ಉಪನ್ಯಾಸಕರು, ಸಿಬ್ಬಂದಿಗಳಿಗೆ ಫೇಸ್ ಶೀಲ್ಡ್ ಮಾಸ್ಕ್ ಧರಿಸುವಂತೆ ಸೂಚನೆ ನೀಡಲಾಗಿದೆ ಎಂದು ರಾಜು ತಿಳಿಸಿದರು.

ಇದರೊಂದಿಗೆ ಸೋಮವಾರಪೇಟೆಯ ಚಾಣಕ್ಯ ಪದವಿ ಕಾಲೇಜು, ಸಂತ ಜೋಸೆಫರ ಕಾಲೇಜುಗಳಲ್ಲೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ತರಗತಿಗಳ ಆರಂಭಕ್ಕೆ ಸಿದ್ಧತೆ ನಡೆಸಲಾಗಿದೆ.

ಕುಶಾಲನಗರ

ಕುಶಾಲನಗರ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮಹಾತ್ಮಗಾಂಧಿ ಮೆಮೋರಿಯಲ್ ಡಿಗ್ರಿ ಕಾಲೇಜು, ಅನುಗ್ರಹ ಪದವಿ ಕಾಲೇಜ್ ಮತ್ತು ಕನ್ನಡ ಭಾರತಿ ಪದವಿ ಕಾಲೇಜುಗಳಲ್ಲಿ ಕೋವಿಡ್ ಮಾರ್ಗಸೂಚಿಯಂತೆ ಆಡಳಿತ ಮಂಡಳಿ ಮತ್ತು ಬೋಧಕ ಬೋಧಕೇತರ ವರ್ಗ ಬರಮಾಡಿಕೊಂಡಿದ್ದು ಕಂಡು ಬಂತು. ಪ್ರತೀ ವಿದ್ಯಾರ್ಥಿಗಳಿಗೆ ಜ್ವರ ಪರೀಕ್ಷೆ ಮತ್ತು ಸ್ಯಾನಿಟೈಸಿಂಗ್ ಮಾಡಿ ನಂತರ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಯಿತು. ಕುಶಾಲನಗರ ಎಂಜಿಎಂ ಪದವಿ ಕಾಲೇಜಿನಲ್ಲಿ ಶೇ.85 ರಷ್ಟು ವಿದ್ಯಾರ್ಥಿಗಳು ಹಾಜರಾದರೆ, ಉಳಿದೆಡೆ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣವಾಗಿತ್ತು. ಕೆಲವು ಕಾಲೇಜಿನ ಮಕ್ಕಳು ಸ್ಥಳೀಯ ಸರ್ಕಾರಿ ಆಸ್ಪತ್ರೆ ಕೋವಿಡ್ ಪರೀಕ್ಷಾ ಕೇಂದ್ರದಲ್ಲಿ ಗಂಟಲು ದ್ರವ ಪರೀಕ್ಷೆಗೆ ಸರತಿ ಸಾಲಿನಲ್ಲಿ ನಿಂತ ದೃಶ್ಯ ಕಂಡು ಬಂತು.

ತಮ್ಮ ಸಂಸ್ಥೆಯ ಬೋಧಕ ಬೋಧಕೇತರ ಸಿಬ್ಬಂದಿಗಳಿಗೆ ಸ್ಥಳೀಯ ಸರ್ಕಾರಿ ವೈದ್ಯರ ಮೂಲಕ ಕೋವಿಡ್ ಪರೀಕ್ಷೆ ನಡೆಸಲಾಗಿದೆ ಎಂದು ತಿಳಿಸಿರುವ ಎಂಜಿಎಂ ಪದವಿ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಎಂ.ಎಂ ಶಂಭುಲಿಂಗಪ್ಪ ಸರ್ಕಾರದ ಸುತ್ತೋಲೆಯಂತೆ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗಿದೆ ಎಂದರು. ಕಾಲೇಜು ಕಡೆಯಿಂದ ಎಲ್ಲಾ ರೀತಿಯ ಕ್ರಮ ಕೈಗೊಂಡರೂ ವಿದ್ಯಾರ್ಥಿಗಳ ಪೋಷಕರ ಸಹಕಾರ ಕೂಡಾ ಅಗತ್ಯ ಎಂದು ತಿಳಿಸಿದ್ದಾರೆ.

ಇದೇ ರೀತಿ ಸ್ಥಳೀಯ ಕನ್ನಡ ಭಾರತಿ ಪದವಿ ಕಾಲೇಜಿನ ಪ್ರಾಂಶುಪಾಲರಾದ ಪುರುಷೋತ್ತಮ್, ಅನುಗ್ರಹ ಪದವಿ ಕಾಲೇಜಿನ ಪ್ರಾಂಶುಪಾಲರಾದ ಪಂಡರಿನಾಥನಾಯ್ಡು ಅವರುಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು ವಿದ್ಯಾರ್ಥಿಗಳಿಗೆ ಸೋಂಕು ತಗುಲದಂತೆ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕಾಗಿದೆ ಎಂದು ತಿಳಿಸಿದ್ದಾರೆ.

ಗ್ರಾಮೀಣ ಭಾಗದಿಂದ ಕಾಲೇಜಿಗೆ ಆಗಮಿಸಿದ ವಿದ್ಯಾರ್ಥಿಗಳು ಬೆಳಗ್ಗಿನ ವೇಳೆ ಕಾಲೇಜಿಗೆ ಬರಲು ಸೂಕ್ತ ಬಸ್ ವ್ಯವಸ್ಥೆಯ ಕೊರತೆಯ ಬಗ್ಗೆ ತಮ್ಮ ಅಳಲನ್ನು ತೋಡಿಕೊಂಡರು. ಈ ಹಿಂದೆ ಆನ್‍ಲೈನ್ ತರಗತಿ ಕಳೆದ 3 ತಿಂಗಳಿನಿಂದ ನಡೆಯುತ್ತಿದ್ದು ಇದೀಗ ನೇರವಾಗಿ ಕಾಲೇಜಿಗೆ ಬರುವ ವಿದ್ಯಾರ್ಥಿಗಳಿಗೆ ಹಲವು ಸಮಸ್ಯೆಗಳು ಕಂಡು ಬರಬಹುದು ಎಂದು ಮಹಾತ್ಮ ಗಾಂಧಿ ಮೆಮೋರಿಯಲ್ ಕಾಲೇಜಿನ ಪ್ರಾಂಶುಪಾಲರಾದ ಎಂ. ರತ್ನಕುಮಾರ್ ತಿಳಿಸಿದ್ದಾರೆ.

ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಕೋವಿಡ್ ಪರೀಕ್ಷೆಗೆ ಗಂಟಲು ದ್ರವ ಸಂಗ್ರಹಿಸಲಾಗುತ್ತಿದ್ದು ಈ ಬಗ್ಗೆ ವರದಿಯನ್ನು ಆರೋಗ್ಯ ಇಲಾಖೆ ಮೂಲಕ ವಿಶ್ವವಿದ್ಯಾನಿಲಯಕ್ಕೆ ಕಳುಹಿಸಲಾಗುವುದು ಎಂದು ಡಾ. ಅಫ್ರೀನ ಅವರು ಪತ್ರಿಕೆಗೆ ಮಾಹಿತಿಯಿತ್ತರು.

ವೀರಾಜಪೇಟೆ: ಪದವಿ ಕಾಲೇಜು ಆರಂಭದ ಹಿನ್ನೆಲೆಯಲ್ಲಿ ವೀರಾಜಪೇಟೆ ತಾಲೂಕು ಆರೋಗ್ಯ ಇಲಾಖೆಯ ವತಿಯಿಂದ ವೀರಾಜಪೇಟೆಯ ಸೈಂಟ್ ಆನ್ಸ್ ಪದವಿ ಕಾಲೇಜಿನಲ್ಲಿ ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳಿಗೆ ಕೋವಿಡ್ -19ನ ಆರ್ ಟಿಪಿಸಿಆರ್ ಪರೀಕ್ಷೆ ನಡೆಸಲಾಯಿತು.

ಈ ಸಂದರ್ಭದಲ್ಲಿ ವ್ಯವಸ್ಥಾಪಕ ರೆ.ಫಾ. ಮದಲೈ ಮುತ್ತು, ಕಾಲೇಜಿನ ಪ್ರಾಂಶುಪಾಲ ರೆ.ಫಾ. ರೋನಿ ರವಿಕುಮಾರ್, ಜಿಲ್ಲಾ ಆರೋಗ್ಯ ಸರ್ವೇಕ್ಷಣಾ ಘಟಕದ ಮೇಲ್ವಿಚಾರಕ ಮಂಜುನಾಥ್, ವೀರಾಜಪೇಟೆ ತಾಲೂಕು ಕಿರಿಯ ಪುರುಷ ಆರೋಗ್ಯ ನಿರೀಕ್ಷಕ ಸುದರ್ಶನ್ ಕೆ.ಎಂ, ಆರೋಗ್ಯ ಇಲಾಖೆಯ ಪ್ರಯೋಗ ಶಾಲಾ ತಂತ್ರಜ್ಞರಾದ ಸುನಿತ ಎಂ. ಆರೋಗ್ಯ ಇಲಾಖೆಯ ಮಧು ಕೆ.ಜಿ., ಕಾಲೇಜಿನ ಕೋವಿಡ್-19 ಟಾಸ್ಕ್ ಫೆÇೀರ್ಸ್ ಸಂಯೋಜನಾಧಿಕಾರಿ ಹಾಗೂ ಎನ್‍ಎಸ್‍ಎಸ್ ಅಧಿಕಾರಿ ಅರ್ಜುನ್ ಹೆಚ್.ಆರ್ ಸೇರಿದಂತೆ ಎಲ್ಲಾ ಉಪನ್ಯಾಸಕರು ಹಾಜರಿದ್ದರು.