ಮಡಿಕೇರಿ, ನ. 15: ರಾಜ್ಯದಲ್ಲಿ ಅವಧಿ ಪೂರ್ಣಗೊಂಡಿರುವ ಗ್ರಾಮ ಪಂಚಾಯಿತಿಗಳಿಗೆ ಮುಂದಿನ ಮೂರು ವಾರದಲ್ಲಿ ಚುನಾವಣಾ ವೇಳಾಪಟ್ಟಿ ಪ್ರಕಟಿಸುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ರಾಜ್ಯ ಹೈಕೋರ್ಟ್ ನಿರ್ದೇಶನ ನೀಡಿರುವ ಹಿನ್ನೆಲೆಯಲ್ಲಿ ಈತನಕ ಅನಿಶ್ಚಿತತೆಯಿಂದ ಕೂಡಿದ್ದ ಈ ಚುನಾವಣೆ ಇದೀಗ ಮಹತ್ವ ಪಡೆಯುತ್ತಿದೆ. ನ್ಯಾಯಾಲಯದ ಸೂಚನೆ ಪ್ರಕಟಣೆಗೊಂಡ ಬೆನ್ನಲ್ಲೇ ರಾಜ್ಯದಲ್ಲಿ ಈ ಚುನಾವಣೆಯ ಕಾವು ಆರಂಭಗೊಂಡಂತಾಗಿದೆ. ಕಳೆದ ಜೂನ್ - ಜುಲೈ ತಿಂಗಳಿನಲ್ಲಿ ಗ್ರಾ.ಪಂ.ಗಳ ಅಧಿಕಾರಾವಧಿ ಮುಕ್ತಾಯಗೊಂಡಿದ್ದು, ಕೊರೊನಾ ಕಾರಣದಿಂದಾಗಿ ಈ ಚುನಾವಣೆ ಆ ಸಂದರ್ಭದಲ್ಲಿ ಮುಂದೂಡಲ್ಪಟ್ಟಿತ್ತು. ಚುನಾವಣೆಗೆ ಸಂಬಂಧಿಸಿದಂತೆ ಸಿದ್ಧತೆಗಳು ಆರಂಭಗೊಂಡಿತ್ತಾದರೂ ಚುನಾವಣಾ ಆಯೋಗ ಕೊರೊನಾ ಸನ್ನಿವೇಶದಿಂದಾಗಿ ಚುನಾವಣೆ ನಡೆಸುವುದು ಸದ್ಯಕ್ಕೆ ಸಾಧ್ಯವಾಗದು ಎಂಬ ತೀರ್ಮಾನ ಪ್ರಕಟಿಸಿದ್ದರಿಂದ ಎಲ್ಲವೂ ಸ್ಥಗಿತಗೊಂಡಿತ್ತು. ಚುನಾವಣೆಯಲ್ಲಿ ಸ್ಪರ್ಧಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು, ವಿವಿಧ ರಾಜಕೀಯ ಪಕ್ಷಗಳಲ್ಲೂ ಇದೀಗ ಸಂಚಲನ ಸೃಷ್ಟಿಯಾಗಿದೆ.ನಾಳೆ ವೀಡಿಯೋ ಕಾನ್ಫರೆನ್ಸ್ಚು ನಾವಣೆಗೆ ಸಂಬಂಧಿಸಿದಂತೆ ಸಿದ್ಧತೆಗಳ ಬಗ್ಗೆ ರಾಜ್ಯ ಚುನಾವಣಾ ಆಯೋಗದಿಂದ ತಾ. 17 ರಂದು (ನಾಳೆ) ರಾಜ್ಯದ ಎಲ್ಲಾ ಜಿಲ್ಲಾಧಿಕಾರಿ ಗಳೊಂದಿಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಸಮಾಲೋಚನೆ ನಡೆಸ ಲಾಗುತ್ತಿದೆ. ಇದರಲ್ಲಿ ಚುನಾವಣಾ ಆಯೋಗ ಇದಕ್ಕೆ ಸಂಬಂಧಿಸಿದಂತೆ ನೀಡುವ(ಮೊದಲ ಪುಟದಿಂದ) ಸಲಹೆ - ಸೂಚನೆಗಳಂತೆ ಚುನಾವಣೆಗೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಈಗಾಗಲೇ ಹಲವು ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ಮತದಾರರ ಪಟ್ಟಿ, ಮೀಸಲಾತಿ ನಿಗದಿಯಂತಹ ವಿಚಾರಗಳನ್ನು ಪೂರ್ಣಗೊಳಿಸಲಾಗಿದೆ. ಇನ್ನುಳಿದಂತೆ ಚುನಾವಣೆ ನಡೆಸುವ ಕುರಿತು ಅಗತ್ಯತೆಗಳಾದ ಮತಗಟ್ಟೆಗಳು, ಕರ್ತವ್ಯಕ್ಕೆ ನಿಯೋಜಿತರಾಗಬೇಕಾದ ಚುನಾವಣಾ ಅಧಿಕಾರಿಗಳು, ಬಂದೋಬಸ್ತ್ ಇನ್ನಿತರ ಪ್ರಕ್ರಿಯೆಗಳ ಬಗ್ಗೆ ಚುನಾವಣಾ ಆಯೋಗದ ಸ್ಪಷ್ಟ ನಿರ್ದೇಶನ ದೊರೆತ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದು ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದರು. ಲೋಕಸಭಾ ಹಾಗೂ ವಿಧಾನಸಭಾ ಚುನಾವಣೆಗೆ ನಡೆದ ಮತಗಟ್ಟೆಗಳೇ ಬಹುತೇಕ ಗ್ರಾ.ಪಂ. ಚುನಾವಣೆ ಯಲ್ಲೂ ಕಾರ್ಯನಿರ್ವಹಿಸಲಿವೆ ಎಂದು ಅವರು ಮಾಹಿತಿಯಿತ್ತರು.

ಜಿಲ್ಲೆಯಲ್ಲಿ 101 ಪಂಚಾಯಿತಿಗಳು

ಕೊಡಗು ಜಿಲ್ಲೆಯಲ್ಲಿ ಒಟ್ಟು 104 ಗ್ರಾಮ ಪಂಚಾಯಿತಿಗಳಿದ್ದು, ಇವುಗಳ ಬಗ್ಗೆ ಚುನಾವಣಾ ಆಯೋಗದ ಸ್ಪಷ್ಟ ನಿರ್ದೇಶನ ದೊರೆತ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದು ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದರು. ಲೋಕಸಭಾ ಹಾಗೂ ವಿಧಾನಸಭಾ ಚುನಾವಣೆಗೆ ನಡೆದ ಮತಗಟ್ಟೆಗಳೇ ಬಹುತೇಕ ಗ್ರಾ.ಪಂ. ಚುನಾವಣೆ ಯಲ್ಲೂ ಕಾರ್ಯನಿರ್ವಹಿಸಲಿವೆ ಎಂದು ಅವರು ಮಾಹಿತಿಯಿತ್ತರು.

ಜಿಲ್ಲೆಯಲ್ಲಿ 101 ಪಂಚಾಯಿತಿಗಳು

ಕೊಡಗು ಜಿಲ್ಲೆಯಲ್ಲಿ ಒಟ್ಟು 104 ಗ್ರಾಮ ಪಂಚಾಯಿತಿಗಳಿದ್ದು, ಇವುಗಳ ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಲು ಕಸರತ್ತು ಆರಂಭಿಸಿದ್ದಾರೆ. ಇದು ರಾಜಕೀಯ ಪಕ್ಷದ ಚಿಹ್ನೆಯಡಿಯಲ್ಲಿ ನಡೆಯುವ ಚುನಾವಣೆ ಅಲ್ಲವಾದರೂ ಪ್ರಸ್ತುತದ ವರ್ಷಗಳಲ್ಲಿ ಪಕ್ಷ ಆಧಾರಿತವಾಗಿ ಪಕ್ಷಗಳ ಬೆಂಬಲದಡಿಯಲ್ಲೇ ಅಭ್ಯರ್ಥಿಗಳು ಹೆಚ್ಚಾಗಿ ಕಣಕ್ಕಿಳಿಯುವುದರಿಂದ ರಾಜಕೀಯ ಪಕ್ಷಗಳಲ್ಲೂ ಇದೀಗ ಚುನಾವಣೆಯ ಕಾವು ಏರ ತೊಡಗಿದ್ದು, ರಾಜಕೀಯ ಚಟುವಟಿಕೆಗಳು ಗರಿಗೆದರುತ್ತಿವೆ.