ನಾಪೆÇೀಕ್ಲು, ನ. 15: ಕೊಡಗಿನಲ್ಲಿ ಹುತ್ತರಿ ಹಬ್ಬ ಈ ಬಾರಿ ತಾ. 30 ರಂದು ನಡೆಯಲಿದೆ. ಕೊಡಗಿನ ಕುಲದೈವ ಕಕ್ಕಬ್ಬೆ ಪಾಡಿ ಶ್ರೀ ಇಗ್ಗುತ್ತಪ್ಪ ದೇವಳದಲ್ಲಿ ಕಲಾಡ್ಚ ಹಬ್ಬ, ಹುತ್ತರಿ ಹಬ್ಬದ ಶುಭ ದಿನ, ಶುಭ ಘಳಿಗೆಯನ್ನು ಇಂದು ದೇವಳದ ಪಾರಂಪರಿಕ ಜೋತಿಷ್ಯರಾದ ಅಮ್ಮಂಗೇರಿ ಜ್ಯೋತಿಷ್ಯರಾದ ಶಶಿಕುಮಾರ್ ಹಾಗೂ ಇತರರು ಧಾರ್ಮಿಕ ವಿಧಿವಿಧಾನ ಗಳೊಂದಿಗೆ ನಿಗದಿಪಡಿಸಿದರು. ಅದರಂತೆ ತಾ 29ರಂದು ಪಾಡಿ ಶ್ರೀ ಇಗ್ಗುತ್ತಪ್ಪ ದೇವಳದಲ್ಲಿ ಹುತ್ತರಿ ಕಲಾಡ್ಚ ಹಬ್ಬ ನಡೆಯಲಿದೆ. ತಾ. 30ರಂದು ರಾತ್ರಿ ರೋಹಿಣಿ ನಕ್ಷತ್ರದಲ್ಲಿ ಹುತ್ತರಿ ಹಬ್ಬ ನಡೆಯಲಿದ್ದು, ದೇವಳದಲ್ಲಿ ರಾತ್ರಿ 7.15 ಗಂಟೆಗೆ ನೆರೆ ಕಟ್ಟುವದು. 8.15 ಗಂಟೆಗೆ ಕದಿರು ತೆಗೆಯುವದು ಮತ್ತು 9.15 ಗಂಟೆಗೆ ಪ್ರಸಾದ ಭೋಜನಕ್ಕೆ ಪ್ರಶಸ್ತ ಸಮಯವೆಂದು ನಿಗದಿಪಡಿಸಲಾಗಿದೆ. ಸಾರ್ವಜನಿಕರಿಗೆ (ನಾಡ್ ಪೆÇೀದ್) ಸಂಜೆ 7.45ಗಂಟೆಗೆ ನೆರೆ ಕಟ್ಟುವದು, 8.45ಗಂಟೆಗೆ ಕದಿರು ತೆಗೆಯುವದು ಮತ್ತು 9.45ಗಂಟೆಗೆ ಭೋಜನಕ್ಕೆ ವೇಳೆ ನಿಗದಿಪಡಿಸಲಾಗಿದೆ.
ಈ ಸಂದರ್ಭ ಮಾತನಾಡಿದ ದೇವಳದ ದೇವತಕ್ಕರಾದ ಪರದಂಡ ಡಾಲಿ ಹುತ್ತರಿ ಹಬ್ಬದ ಪ್ರಯುಕ್ತ ತಾ. 15ರಂದು ಪಾಡಿ ಶ್ರೀ ಇಗ್ಗುತ್ತಪ್ಪ ದೇವರ ಆದಿ ಸ್ಥಳ ಮಲ್ಮದಲ್ಲಿ ತಕ್ಕ ಮುಖ್ಯಸ್ಥರೊಂದಿಗೆ ಸೇರಿ ದೇಶ ಕಟ್ಟು ವಿಧಿಸಲಾಗಿದೆ. ತಾ. 29ರಂದು ದೇವಳದಲ್ಲಿ ಕಲಾಡ್ಚ ಹಬ್ಬ ನಡೆದು ಎತ್ತುಪೋರಾಟ, ದೇವರ ಮೂರ್ತಿ ಯೊಂದಿಗೆ ಆದಿ ಸ್ಥಳ ಮಲ್ಮಕ್ಕೆ ತೆರಳಿ ಸಂಪ್ರದಾಯದಂತೆ ಪೂಜಾ ವಿದಿವಿಧಾನಗಳನ್ನು ನೆರವೇರಿಸಿದ ನಂತರ ಕಟ್ಟು ಸಡಿಲಿಸಲಾಗುವದು. ಈ ಸಮಯದಲ್ಲಿ ಹಸಿರು ಮರ ಕಡಿಯುವದು, ರಕ್ತಪಾತ, ಪ್ರಾಣಿ ಹಿಂಸೆ, ಮಧು ಮಾಂಸ ಸೇವನೆ, ಸಭೆ ಸಮಾರಂಭಗಳನ್ನು ನಡೆಸುವದನ್ನು ನಿಷೇಧಿಸಲಾಗಿದೆ. ಎಲ್ಲಾ ಭಕ್ತ ಭಾಂದವರು ಶ್ರೀ ದೇವರ ಕಟ್ಟು ಕಟ್ಟಳೆ ಗಳನ್ನು ಸರಿಯಾಗಿ ಪಾಲಿಸಬೇಕೆಂದು ಅವರು ಮನವಿ ಮಾಡಿದರು.
ಈ ಸಂದರ್ಭ ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾಚಮಂಡ ಲವ ಚಿಣ್ಣಪ್ಪ, ಭಕ್ತಜನ ಸಂಘದ ಅಧ್ಯಕ್ಷ ಕಾಂಡಂಡ ಜೋಯಪ್ಪ, ದೇವಳ ಸಮಿತಿ ಹಾಗೂ ಭಕ್ತಜನ ಸಂಘದ ಎಲ್ಲಾ ನಿರ್ದೇಶಕರು, ದೇವಳಕ್ಕೆ ಸಂಬಂಧಿಸಿದ ಎಲ್ಲಾ ಕುಟುಂಬದ ತಕ್ಕಮುಖ್ಯಸ್ಥರು, ಪಾರುಪತ್ತೆಗಾರ ಪರದಂಡ ಪ್ರಿನ್ಸ್ ತಿಮ್ಮಯ್ಯ, ಜ್ಯೋತಿಷ್ಯ ಕುಟುಂಬದ ಕಣಿಯರ ನಾಣಯ್ಯ, ದೇವಳದ ಸಿಬ್ಬಂದಿ ವರ್ಗ, ಭಕ್ತಾದಿಗಳು ಹಾಜರಿದ್ದರು.