ಮಡಿಕೇರಿ, ನ. 15: ರಾಷ್ಟ್ರೀಯ ಆಯುರ್ವೇದ ದಿನಾಚರಣೆಯ ಅಂಗವಾಗಿ ಮೇಕೇರಿಯ ಶ್ರೀ ಧನ್ವಂತರಿ ಸನ್ನಿಧಿಯಲ್ಲಿ ಕೊಡಗು ಜಿಲ್ಲಾ ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಷನ್ (ನಿಮಾ) ವತಿಯಿಂದ ಸಾಯಿ ಮಂದಿರದ ಸಹಯೋಗದೊಂದಿಗೆ ಧನ್ವಂತರಿ ಯಾಗ ಮತ್ತು ಪ್ರಾಣಾಯಾಮ ತರಬೇತಿ ಶಿಬಿರವನ್ನು ಏರ್ಪಡಿಸಲಾಯಿತು.

ವೇದಮೂರ್ತಿ ನರಸಿಂಹ ಭಟ್ಟರು ವೇದೋಕ್ತ ವಿಧಿಯಂತೆ ಯಾಗವನ್ನು ನಡೆಸಿಕೊಟ್ಟರು. ಯೋಗ ಪದವೀಧರೆ ಡಾ. ವಿನಯಶ್ರೀ ಸುಲಭ ಪ್ರಾಣಾಯಾಮ ತರಬೇತಿಯನ್ನು ನೀಡಿದರು.

ಪ್ರಸಾದ್ ಕ್ಲಿನಿಕ್‍ನ ಡಾ. ರವಿಪ್ರಸಾದ್ ಅವರನ್ನು ಕೊಡಗು ಐ.ಎಂ.ಎ. ಅಧ್ಯಕ್ಷ ಡಾ. ಶ್ಯಾಮ್ ಅಪ್ಪಣ್ಣ ಸನ್ಮಾನಿಸಿದರು. ಅವರಿಗೆ ಈ ಸಂದರ್ಭ ‘ಬಿಷÀಕ್ ರತ್ನ’ ಎಂಬ ಬಿರುದು ನೀಡಲಾಯಿತು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಇ.ಎನ್. ಟಿ. ತಜ್ಞರಾದ ಡಾ. ಮೋಹನ್ ಅಪ್ಪಾಜಿ ವೈದ್ಯರುಗಳ ಸಂಘಟನೆಯ ಮಹತ್ವವನ್ನು ವಿವರಿಸಿದರು.

ಕೊಡಗು ನಿಮಾದ ಅಧ್ಯಕ್ಷ ಡಾ ರಾಜಾರಾಮ್ ಕಾರ್ಯಕ್ರಮ ನಿರೂಪಿಸಿದರು. ಡಾ ಪದ್ಮನಾಭ, ಡಾ. ಉದಯ ಕುಮಾರ್, ಡಾ. ಮಹೇಶ್, ಡಾ ಶೈಲಜಾ ಮುರಳೀಧರ್, ಡಾ ಪುರುಷೋತ್ತಮ, ಡಾ. ಯು.ಪಿ. ಜಯರಾಮ್, ಡಾ. ಜ್ಯೋತಿ ರಾಜಾರಾಮ್, ಡಾ. ರಾಜೇಂದ್ರ, ಡಾ. ಶೈಲಜಾ ರಾಜೇಂದ್ರ, ಡಾ. ಸೌಮ್ಯ ಗಣರಾಜ್, ಡಾ. ಲತಾ ಸುಧೀರ್, ಡಾ ಶುಭಾ ರಾಜ್, ಡಾ. ಈಶ್ವರಿ, ಡಾ. ಉದಯಶಂಕರ್, ಡಾ. ಶ್ಯಾಮ್ ಪ್ರಸಾದ್ ಮೊದಲಾದ ವೈದ್ಯರು ಯಾಗದಲ್ಲಿ ಪಾಲ್ಗೊಂಡರು.