ಕೂಡಿಗೆ, ನ. 15: ತೊರೆನೂರು ಗ್ರಾಮದಲ್ಲಿ ಜನತಾ ಬಡಾವಣೆಯ ಗ್ರಾಮೀಣ ಗ್ರಂಥಾಲಯದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಘಟಕದ ಆಶ್ರಯದಲ್ಲಿ ಪರಿಸರ ಸ್ನೇಹಿ ಹಸಿರು ದೀಪಾವಳಿ ಆಚರಣೆ ಕುರಿತು ಜನಜಾಗೃತಿ ಮೂಡಿಸಲಾಯಿತು.

ಗ್ರಂಥಾಲಯದ ಮೇಲ್ವಿಚಾರಕರೂ ಆದ ಪರಿಸರ ಕಾರ್ಯಕರ್ತ ಟಿ.ವಿ. ಸಾಗರ್ ತೊರೆನೂರು ಅವರ ನೇತೃತ್ವದಲ್ಲಿ ಆ ಬಡಾವಣೆಯ ಕೂಡಿಗೆ, ನ. 15: ತೊರೆನೂರು ಗ್ರಾಮದಲ್ಲಿ ಜನತಾ ಬಡಾವಣೆಯ ಗ್ರಾಮೀಣ ಗ್ರಂಥಾಲಯದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಘಟಕದ ಆಶ್ರಯದಲ್ಲಿ ಪರಿಸರ ಸ್ನೇಹಿ ಹಸಿರು ದೀಪಾವಳಿ ಆಚರಣೆ ಕುರಿತು ಜನಜಾಗೃತಿ ಮೂಡಿಸಲಾಯಿತು.

ಗ್ರಂಥಾಲಯದ ಮೇಲ್ವಿಚಾರಕರೂ ಆದ ಪರಿಸರ ಕಾರ್ಯಕರ್ತ ಟಿ.ವಿ. ಸಾಗರ್ ತೊರೆನೂರು ಅವರ ನೇತೃತ್ವದಲ್ಲಿ ಆ ಬಡಾವಣೆಯ ಕೈಗೊಳ್ಳಬೇಕೆಂದರು.

ಹಸಿರು ದೀಪಾವಳಿ ಆಚರಣೆಯ ಮಹತ್ವ ಕುರಿತು ತೊರೆನೂರು ಸರ್ಕಾರಿ ಪ್ರೌಢಶಾಲೆಯ ಕನ್ನಡ ಅಧ್ಯಾಪಕ ಟಿ.ಬಿ.ಮಂಜುನಾಥ್ ಮಕ್ಕಳಿಗೆ ಅರಿವು ಮೂಡಿಸಿದರು.

ಗೃಹಿಣಿ ಹೇಮಾ ಶಿವಾಜಿ ಮಣ್ಣಿನ ಹಣತೆ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಹಿರಿಯ ನಾಗರಿಕ ಸಿದ್ದೋಜಿರಾವ್, ಎಂ.ಸಿ. ನಾಗರಾಜು, ಟಿ.ಎನ್. ವಿಶ್ವಮೂರ್ತಿ, ಲೀಲಾವತಿ, ಶಿವಾಜಿ ಸೇರಿದಂತೆ ಬಡಾವಣೆಯ ನಿವಾಸಿಗಳು, ಮಕ್ಕಳು ಪಾಲ್ಗೊಂಡಿದ್ದರು.

ಹೆಬ್ಬಾಲೆ: ಹೆಬ್ಬಾಲೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ರಾಷ್ಟ್ರೀಯ ಹಸಿರು ಪಡೆಯ ಇಕೋ ಕ್ಲಬ್ ಹಾಗೂ ಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಘಟಕದ ವತಿಯಿಂದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕೊಡಗು ಪ್ರಾದೇಶಿಕ ಕಚೇರಿ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕೊಡಗು ಜಿಲ್ಲಾ ಸಮಿತಿಯ ಸಂಯುಕ್ತಾಶ್ರಯದಲ್ಲಿ ವಿದ್ಯಾರ್ಥಿಗಳು ತಮ್ಮ ತಮ್ಮ ಮನೆಯಲ್ಲಿಯೇ ಪರಿಸರ ಸ್ನೇಹಿ ಹಸಿರು ದೀಪಾವಳಿ ಆಚರಿಸಿದರು.

ಶಾಲೆಯ ಮುಖ್ಯ ಶಿಕ್ಷಕ ಎಚ್.ಎಂ. ವೆಂಕಟೇಶ್ ಮಾರ್ಗ ದರ್ಶನದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಘಟಕದ ಮಾರ್ಗದರ್ಶಿ ಶಿಕ್ಷಕಿ ಸಿ.ಎಂ. ಬಬಿತ ಅವರು ಗೂಗಲ್ ಮೀಟ್ ಮತ್ತು ದೂರವಾಣಿ ಮೂಲಕ ನೀಡಿದ ಮಾರ್ಗದರ್ಶನದಲ್ಲಿ ಮಕ್ಕಳು ಮನೆಯಲ್ಲಿ ಪಟಾಕಿ ತ್ಯಜಿಸಿ ಮಣ್ಣಿನ ಹಣತೆ ಬೆಳಗಿಸುವ ಮೂಲಕ ಹಸಿರು ದೀಪಾವಳಿ ಆಚರಿಸಿದರು.

ಶಾಲೆಯಿಂದ ವೆಬಿನಾರ್ ಮೂಲಕ ಮಕ್ಕಳಿಗೆ ಹಸಿರು ದೀಪಾವಳಿ ಆಚರಣೆ ಕುರಿತು ಶಾಲಾ ಮುಖ್ಯ ಶಿಕ್ಷಕ ಎಚ್.ಎಂ. ವೆಂಕಟೇಶ್ ಮಾಹಿತಿ ನೀಡಿದರು.