ಮಡಿಕೇರಿ, ನ. 13: ನೆಲ್ಲಿಹುದಿಕೇರಿಯ ಅರೆಕಾಡು ಗ್ರಾಮದ ಅರೆಕಾಡ್ ಮಂದ್‍ನಲ್ಲಿ ತಾ. 12 ರಂದು ಸಿ.ಎನ್.ಸಿ. ವತಿಯಿಂದ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಸಿ.ಎನ್.ಸಿ. ಅಧ್ಯಕ್ಷ ಎನ್.ಯು. ನಾಚಪ್ಪ ಕೊಡವ ಬುಡಕಟ್ಟು ಕುಲ ಹಾಗೂ ಭೂ ರಾಜಕೀಯ ಸ್ವಾಯತ್ತತೆಯ ಕುರಿತು ಮಾತನಾಡಿದರು. ಊರಿನ ಪ್ರಮುಖರಾದ ತೊಂಡ್ಯಂಡ ನಾಣಯ್ಯ ಅವರನ್ನು ಕಾರ್ಯಕ್ರಮಕ್ಕೆ ಕುಕ್ಕೇರ ಜಯ ಚಿನ್ನಪ್ಪ ಸ್ವಾಗತಿಸಿದರು. ಬಲ್ಲಚಂಡ ವಿಠಲ್ ಕಾವೇರಪ್ಪ ಕಾರ್ಯಕ್ರಮ ನಿರೂಪಿಸಿದರು ಹಾಗೂ ಕುಕ್ಕೇರ ಕೇಶು ಉತ್ತಪ್ಪ ವಂದಿಸಿದರು.