ಸೋಮವಾರಪೇಟೆ,ನ.13: ರಸ್ತೆಯಲ್ಲಿ ಬಿದ್ದು ಸಿಕ್ಕಿದ ರೂ. 30 ಸಾವಿರ ಮೌಲ್ಯದ ಮೊಬೈಲನ್ನು ವಾರಸುದಾರರಿಗೆ ಹಸ್ತಾಂತರಿಸುವ ಮೂಲಕ ವೀರಾಜಪೇಟೆಯ ಕಾಕೋಟುಪರಂಬು ಗ್ರಾಮದ ಮಂಡೇಟಿರ ದಿವ್ಯ ಅವರು ತಮ್ಮ ಪ್ರಾಮಾಣಿಕತೆ ತೋರಿದ್ದಾರೆ.

ಮಂಡೇಟಿರ ದಿವ್ಯ ಅವರು ಇಂದು ಕಾಕೋಟುಪರಂಬಿನಿಂದ ವೀರಾಜಪೇಟೆಗೆ ತೆರಳುತ್ತಿದ್ದ ಸಂದರ್ಭ ರಸ್ತೆಯಲ್ಲಿ ಸ್ಯಾಮ್‍ಸಂಗ್ ಮೊಬೈಲ್ ಬಿದ್ದುಸಿಕ್ಕಿದೆ. ಮೊಬೈಲ್‍ಗೆ ಬರುತ್ತಿದ್ದ ಕರೆಯನ್ನು ಸ್ವೀಕರಿಸಿದ ಸಂದರ್ಭ, ಕೇರಳ ಮಾನಂದವಾಡಿಯ ಯೂಸುಫ್ ಎಂಬವರು ತಮ್ಮ ಮೊಬೈಲ್ ಕಳೆದುಕೊಂಡ ಬಗ್ಗೆ ತಿಳಿಸಿದ್ದಾರೆ.

ನಂತರ ವೀರಾಜಪೇಟೆಯಲ್ಲಿದ್ದ ಯೂಸುಫ್ ಅವರನ್ನು ಕಾಕೋಟುಪರಂಬು ಗ್ರಾಮಕ್ಕೆ ಕರೆಸಿ, 30 ಸಾವಿರ ಮೌಲ್ಯದ ಮೊಬೈಲ್‍ನ್ನು ಮರಳಿಸುವ ಮೂಲಕ ದಿವ್ಯ ಅವರು ಪ್ರಾಮಾಣಿಕತೆ ಮೆರೆದಿದ್ದಾರೆ.