ಮಡಿಕೇರಿ, ನ. 13: ನಗರದ ಡಿಎಆರ್ ಪೊಲೀಸ್ ವಸತಿ ಗೃಹ ಬಳಿ ಮೇಲ್ಮನೆ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಅವರ ಅನುದಾನ ರೂ. 30 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಉದ್ಯಾನವನ್ನು ಇಂದು ಉದ್ಘಾಟಿಸಲಾಯಿತು.
ಈ ವೇಳೆ ಮೇಲ್ಮನೆ ಸದಸ್ಯರೊಂದಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾಮಿಶ್ರಾ, ಜಿ.ಪಂ. ಅಭಿಯಂತರ ಶ್ರೀಕಂಠಯ್ಯ, ಗುತ್ತಿಗೆದಾರ ಐತ್ತಪ್ಪ ರೈ ಮೊದಲಾದವರು ಹಾಜರಿದ್ದರು. ಉದ್ಘಾಟನೆ ನೆರವೇರಿಸಿ ಮಾತನಾಡಿದ ಮೇಲ್ಮನೆ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಅವರು, ಪೊಲೀಸ್ ಕುಟುಂಬಗಳ ವಿಹಾರಾರ್ಥ ಉಪಯೋಗವಾಗಲಿರುವ ಈ ಉದ್ಯಾನದ ಅಭಿವೃದ್ಧಿಗೆ ಇನ್ನಷ್ಟು ಅನುದಾನವನ್ನು ಸರಕಾರದಿಂದ ಕಲ್ಪಿಸುವದಾಗಿ ಭರವಸೆ ನೀಡಿದರು.