ಮಡಿಕೇರಿ, ನ. 13: ಮಹಿಳೆಯೋರ್ವರು ನಾಪತ್ತೆಯಾಗಿರುವ ಕುರಿತು ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಠಾಣಾ ವ್ಯಾಪ್ತಿಯ ಗ್ರಾಮದ ನಿವಾಸಿ ಸುಶ್ಮೀತ ಎಂಬವರು ಕೆಲ ದಿನಗಳ ಹಿಂದೆ ತಂದೆಯ ಮನೆ ಇರುವ ಜನನಿಕೊಪ್ಪಕ್ಕೆ ಎಂದು ತೆರಳಿದ್ದು, ಬಳಿಕ ನಾಪತ್ತೆಯಾಗಿರುವುದಾಗಿ ಅವರ ಪತಿ ಹನುಮಂತ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ. ಈಕೆಯ ಬಗ್ಗೆ ಸುಳಿವು ದೊರೆತಲ್ಲಿ ಮಾಹಿತಿ ನೀಡುವಂತೆ (08276-278433, 08272-229000) ಪೊಲೀಸ್ ಪ್ರಕಟಣೆ ಕೋರಿದೆ.