ಚೆಟ್ಟಳ್ಳಿ, ನ. 13: ಚೆಟ್ಟಳ್ಳಿಯಲ್ಲಿ ನೂತನ ಕೊಡವ ಸಮಾಜದ ಉದ್ಘಾಟನಾ ಕಾರ್ಯಕ್ರಮ ಚೆಟ್ಟಳ್ಳಿಯ ಅಪೂರ್ವ ಕಾಂಪ್ಲೆಕ್ಸ್‍ನಲ್ಲಿ ಚೆಟ್ಟಳ್ಳಿ ಜೋಮಾಲೆ ಕೂಟದ ಅಧ್ಯಕ್ಷೆ ಮುಳ್ಳಂಡ ಶೋಭಾ ಚಂಗಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ತಾ.16ರಂದು ಪೂರ್ವಾಹ್ನ 10.30 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದೆ. ಸಂಘದ ಲಾಂಛನ ಬಿಡುಗಡೆ, ಆಡಳಿತ ಮಂಡಳಿಯ ಆಯ್ಕೆ, ಸಂಘದ ಬೈಲಾ ಅನುಮೋದನೆ, ಸದಸ್ಯರ ಸೇರ್ಪಡೆ, ಸಂಘದ ಅಭಿವೃದ್ಧಿಯ ಬಗ್ಗೆ ಚರ್ಚಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.