ಕೂಡಿಗೆ, ನ. 13: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಬ್ಯಾಡಗೊಟ್ಟ ಪುನರ್ವಸತಿ ಕೇಂದ್ರದಲ್ಲಿ ಈಗಾಗಲೇ 256 ಮನೆಗಳ ನಿರ್ಮಾಣ ಕಾಮಗಾರಿ ಮುಗಿದು ಸರಕಾರದ ಆದೇಶದಂತೆ ದಿಡ್ಡಳ್ಳಿ ಪುನರ್ವಸತಿ ಜನರಿಗೆ ನೀಡಲಾಗಿತ್ತು. ಅದರಲ್ಲಿ 26 ಮನೆಗಳ ಸಣ್ಣ ಪ್ರಮಾಣದ ಕೆಲಸಗಳು ಆಗದೆ ಹಸ್ತಾಂತರ ಮಾಡಲಾಗಿರಲಿಲ್ಲ. ಇದೀಗ ಪೂರ್ಣ ಪ್ರಮಾಣದ ಕೆಲಸ ಮುಗಿಸಿರುವ ಹಿನ್ನೆಲೆ 26 ಮನೆಗಳನ್ನು ಆಯ್ಕೆಗೊಂಡ ಫಲಾನುಭವಿಗಳಿಗೆ ಹಸ್ತಾಂತರ ಮಾಡಲಾಯಿತು.
ಈ ಸಂದರ್ಭ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಶೇಖರ್, ನಿರ್ಮಿತಿ ಕೇಂದ್ರದ ಇಂಜಿನಿಯರ್ ಬಸವರಾಜು ಸೇರಿದಂತೆ ಪುನರ್ವಸತಿ ಕೇಂದ್ರದ ಪ್ರಮುಖರಾದ ಅಪ್ಪು ಮುತ್ತ ಸ್ವಾಮಿ ಸೇರಿದಂತೆ ಹಲವಾರು ಮಂದಿ ಇದ್ದರು.