*ಗೋಣಿಕೊಪ್ಪಲು, ನ. 13: ಕೊಡಗು ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಭಿಕ್ಷುಕರ ಸಂಖ್ಯೆ ದಿನೆ ದಿನೇ ಅಧಿಕಗೊಳ್ಳುತ್ತಿದ್ದು, ಮೊದಲ ಹಂತವಾಗಿ ಗೋಣಿಕೊಪ್ಪಲು ನಗರದಲ್ಲಿ ಭಿಕ್ಷಾಟನೆ ನಿರ್ಮೂಲನಾ ಕಾರ್ಯಾಚರಣೆ ಹಮ್ಮಿಕೊಳ್ಳುವ ಉದ್ದೇಶವಿದೆ ಎಂದು ಸಮಾಜ ಸೇವಕಿ ಹಾಗೂ ಕರ್ನಾಟಕ ಪ್ರಾಂತ್ಯ ರೈತ ಮತ್ತು ಕಾರ್ಮಿಕ ರಕ್ಷಣಾ ವೇದಿಕೆಯ ಕೊಡಗು ಮಹಿಳಾ ಘಟಕದ ಅಧ್ಯಕ್ಷೆ, ಕರ್ನಾಟಕ ಮಾನವ ಹಕ್ಕು ಸಮಿತಿ ಕೊಡಗು ಜಿಲ್ಲಾಧ್ಯಕ್ಷೆ ಪಡಿಕ್ಕಲ್ ಕುಸುಮಾ ಚಂದ್ರಶೇಖರ್ ತಿಳಿಸಿದ್ದಾರೆ.

ತಾ.11 ರಂದು ಗೋಣಿಕೊಪ್ಪಲಿನಲ್ಲಿ ಅನಾಥ ಶವ ಸಂಸ್ಕಾರ ನೆರವೇರಿಸಿ ಮಾತನಾಡಿದ ಅವರು, ಹಸಿದ ಹೊಟ್ಟೆಗೆ ಆಹಾರ ನೀಡುವ ಬದಲು ಸಾರ್ವಜನಿಕರು ಹಣವನ್ನು ಭಿಕ್ಷೆಯಾಗಿ ನೀಡುತ್ತಿರುವದೇ ಭಿಕ್ಷುಕರ ಸಂಖ್ಯೆ ಜಿಲ್ಲೆಯಲ್ಲಿ ಅಧಿಕವಾಗಲು ಕಾರಣವಾಗಿದೆ ಎಂದರು. ಬುಧವಾರ ಗೋಣಿಕೊಪ್ಪಲಿನ ಬೈಪಾಸ್ ರಸ್ತೆಯ ಮೀನು ಮಳಿಗೆಯೊಂದರ ಸಮೀಪ 75 ವರ್ಷ ಪ್ರಾಯದ ವ್ಯಕ್ತಿಯ ಅನಾಥ ಶವವನ್ನು ಗ್ರಾ.ಪಂ. ನೌಕರರು, ಪೆÇಲೀಸರ ನೆರವಿನೊಂದಿಗೆ ಇಲ್ಲಿನ ಹಿಂದೂ ಸ್ಮಶಾನದಲ್ಲಿ ಕುಸುಮಾ ಚಂದ್ರಶೇಖರ್ ಹಾಗೂ ಶಕುಂತಲಾ ಬಿ.ಎಸ್. ಅವರುಗಳು ಶವ ಸಂಸ್ಕಾರ ನೇರವೇರಿಸಿದ್ದರು. ಕಳೆದೆರಡು ವರ್ಷದಿಂದ ಗೋಣಿಕೊಪ್ಪಲಿನಲ್ಲಿ ಭಿಕ್ಷಾಟನೆ ಮಾಡಿ ಜೀವಿಸುತ್ತಿದ್ದು, ಅನಾರೋಗ್ಯದಿಂದ ಸಾವನ್ನಪ್ಪಿರಬಹುದು ಎಂದು ಅಂದಾಜಿಸಲಾಗಿದೆ.

ಗೋಣಿಕೊಪ್ಪಲು ಹಾಗೂ ಪೆÇನ್ನಂಪೇಟೆ ನಗರದಲ್ಲಿ ಭಿಕ್ಷಾಟನೆ ಮಾಡುವವರ ಸಂಖ್ಯೆ ಅಧಿಕವಾಗುತ್ತಿದ್ದು, ಗೋಣಿಕೊಪ್ಪಲು ಕಾರ್ಯಾಚರಣೆ ನಂತರ ಪೆÇನ್ನಂಪೇಟೆಯಲ್ಲಿಯೂ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವದು ಎಂದು ಕುಸುಮಾ ತಿಳಿಸಿದ್ದಾರೆ.

ಮುಂದಿನ ದಿನಗಳಲ್ಲಿ ಗೋಣಿಕೊಪ್ಪಲು ಗ್ರಾ.ಪಂ., ಪೆÇಲೀಸ್ ಇಲಾಖೆ ಹಾಗೂ ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿಗಳ ಸಹಕಾರದೊಂದಿಗೆ ಭಿಕ್ಷುಕರನ್ನು ಅನಾಥಾಶ್ರಕ್ಕೆ ಕಳುಹಿಸಲು ಉದ್ದೇಶಿಸಲಾಗಿದೆ. ಗ್ರಾ.ಪಂ. ವತಿಯಿಂದ ಅನಾಥ ಶವ ಸಂಸ್ಕಾರ

ಭಿಕ್ಷಾಟನೆ ನಿರ್ಮೂಲನೆಗೆ ಕ್ರಮ - ಮಾನವ ಹಕ್ಕು ಸಮಿತಿ ಅಧ್ಯಕ್ಷೆ