ಸಿದ್ದಾಪುರ, ನ. 13: ಜಮಾಅತೆ ಇಸ್ಲಾಮಿ ಹಿಂದ್ ಜಿಲ್ಲಾ ಸಮಿತಿ ವತಿಯಿಂದ ಸಿದ್ದಾಪುರದಲ್ಲಿ ಸೌಹಾರ್ದ ಸ್ನೇಹ ಮಿಲನ ಕಾರ್ಯಕ್ರಮ ಸಿದ್ದಾಪುರದ ಎಂ.ಜಿ. ರಸ್ತೆಯ ಹೀರಾ ಮಸೀದಿ ಕಟ್ಟಡದ ಸಭಾಂಗಣದಲ್ಲಿ ನಡೆಯಿತು. ಜಮಾಅತೆ ಇಸ್ಲಾಮಿ ಹಿಂದ್ ಜಿಲ್ಲಾ ಕಾರ್ಯದರ್ಶಿ ಪಿ.ಕೆ. ಅಬ್ದುಲ್ ರೆಹಮಾನ್ ಮಾತನಾಡಿ, ಮಾನವ ಕುಲದ ಶ್ರೇಷ್ಠ ಮಾರ್ಗದರ್ಶಕ ಪ್ರವಾಹಿ ಮಹಮ್ಮದ್ ಜೀವನದ ಸೀರತ್ ಅಭಿಯಾನ ರಾಜ್ಯಾದಾದ್ಯಂತ ನಡೆಯುತ್ತಿದ್ದು, ಶಾಂತಿ, ಸಹಬಾಳ್ವೆ, ಸಹೋದರತ್ವ ಸಾರುವ ಸಂದೇಶಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕೆಂದು ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಮಾಅತೆ ಇಸ್ಲಾಮಿ ಹಿಂದ್ ಅಧ್ಯಕ್ಷ ಪಿ.ಪಿ. ಉಮ್ಮರ್ ಹಾಜಿ ವಹಿಸಿದ್ದರು. ಜಿಲ್ಲಾಧ್ಯಕ್ಷ ಎನ್.ಎ. ಅಬ್ದುಲ್ಲಾ, ಗಫೂರ್, ವಕೀಲ ಅಜರುದ್ದೀನ್, ಗ್ರಾ.ಪಂ. ಮಾಜಿ ಉಪಾಧ್ಯಕ್ಷೆ ಸಫಿಯಾ, ನಿವೃತ್ತ ಸೈನಿಕ ಕೆ.ಕೆ. ಅಶೋಕ್ ಇನ್ನಿತರರು ಹಾಜರಿದ್ದರು.