ಸಿದ್ದಾಪುರ, ನ. 13: ಸಂಕಷ್ಟದಲ್ಲಿದ್ದ ಬಡ ಕುಟುಂಬವೊಂದರ ಹೆಣ್ಣು ಮಗಳ ವಿವಾಹ ಕಾರ್ಯಕ್ಕೆ ತ್ಯಾಗತ್ತೂರು ಚ್ಯಾರಿಟೇಬಲ್ ಟ್ರಸ್ಟ್ನಿಂದ ಧನ ಸಹಾಯ ನೀಡಲಾಯಿತು. ಸಮೀಪದ ಬಾಳುಗೋಡು ಗ್ರಾಮದ ಬಡ ಹೆಣ್ಣು ಮಗಳ ವಿವಾಹ ಕಾರ್ಯದ ಬಗ್ಗೆ ಮಾಹಿತಿ ತಿಳಿದ ಚಾರಿಟೇಬಲ್ ಟ್ರಸ್ಟ್ನ ಪದಾಧಿಕಾರಿಗಳು ದಾನಿಗಳ ಸಹಾಯದಿಂದ ಸುಮಾರು ಅರವತ್ತು ಸಾವಿರಕ್ಕೂ ಹೆಚ್ಚು ಹಣವನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ. ಟ್ರಸ್ಟ್ನ ಕಾರ್ಯದರ್ಶಿ ಪಿ.ಎಂ. ಸಲೀಂ, ಅಧ್ಯಕ್ಷ ಅಬ್ದುಲ್ ಸಲಾಂ, ತ್ಯಾಗತ್ತೂರು ಮುಸ್ಲಿಂ ಜಮಾಅತ್ ಸಮಿತಿಯ ಅಧ್ಯಕ್ಷ ಹನೀಫ್, ಕಾರ್ಯದರ್ಶಿ ರಶೀದ್, ಮುಸ್ತಫಾ, ಖತೀಬ್ ಬಶೀರ್ ಸಖಾಫಿ, ಬಾಳುಗೋಡು ಮಸೀದಿ ಅಧ್ಯಕ್ಷ ಮೊಯ್ದಿನ್ ಕುಞ, ಮಸೀದಿಯ ಖತೀಬ್ ಅಬೂಬಕ್ಕರ್ ಮದನಿ, ಟ್ರಸ್ಟ್ನ ಪ್ರಮುಖರು ಹಾಜರಿದ್ದರು.