ಮಡಿಕೇರಿ, ನ. 12: ಹಿಂದೂ ಜಾಗರಣ ವೇದಿಕೆ ವತಿಯಿಂದ ಮಾದಾಪುರದ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸುವುದರೊಂದಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಸಲಾಯಿತು. ಟಿಪ್ಪು ಜಯಂತಿ ವಿರೋಧಿ ಸಮಿತಿ ಜಿಲ್ಲಾ ಅಧ್ಯಕ್ಷ ಅಭಿಮನ್ಯುಕುಮಾರ್, ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಉಪಾಧ್ಯಕ್ಷ ಶುಭಾಸ್ ತಿಮ್ಮಯ್ಯ, ತಾಲೂಕು ಪ್ರಧಾನ ಕಾರ್ಯದರ್ಶಿ ಸುನಿಲ್, ಸಂಘದ ಜಿಲ್ಲಾ ಕಾರ್ಯವಾಹ ಡಾಲಿ, ತಾಲೂಕು ಕಾರ್ಯವಾಹ ಶಶಿಕಾಂತ ಮೊದಲಾದವರು ಭಾಗವಹಿಸಿದ್ದರು.
ಸುಂಟಿಕೊಪ್ಪ: ಟಿಪ್ಪು ಜಯಂತಿ ಸಂದರ್ಭ ಮಡಿಕೇರಿಯಲ್ಲಿ ಮರಣ ಹೊಂದಿದ ವಿಶ್ವ ಹಿಂದೂ ಪರಿಷದ್‍ನ ದಿ. ಕುಟ್ಟಪ್ಪ ಅವರಿಗೆ ನಗರ ಬಿಜೆಪಿ ಹಾಗೂ ವಿಶ್ವ ಹಿಂದೂ ಪರಿಷದ್ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಇಲ್ಲಿನ ಗುಂಡುಗುಟ್ಟಿ ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ವಿಶ್ವ ಹಿಂದೂ ಪರಿಷದ್ ಹಾಗೂ ಸುಂಟಿಕೊಪ್ಪ ಬಿಜೆಪಿ ಕಾರ್ಯಕರ್ತರು ದಿ.ಕುಟ್ಟಪ್ಪ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರ ಆತ್ಮಕ್ಕೆ ಶಾಂತಿಕೋರಿ ಪ್ರಾರ್ಥಿಸಿದರು. ಈ ಸಂದರ್ಭ ಜಿಲ್ಲಾ ವಿಶ್ವಹಿಂದೂ ಪರಿಷದ್ ಕಾರ್ಯದರ್ಶಿ ಡಿ. ನರಸಿಂಹ, ಬಿಜೆಪಿ ನಗರ ನಿಕಟಪೂರ್ವ ಅಧ್ಯಕ್ಷ ಪಿ.ಆರ್. ಸುನಿಲ್‍ಕುಮಾರ್, ಶಕ್ತಿ ಕೇಂದ್ರದ ಪ್ರಮುಖ್ ಬಿ.ಕೆ. ಪ್ರಶಾಂತ್, ವಾಸು, ಪಂಚಾಯಿತಿ ಮಾಜಿ ಸದಸ್ಯ ಸಿ. ಚಂದ್ರ, ಯುವ ಮೋರ್ಚಾದ ವಿಘ್ನೇಶ್, ಕನ್ನೀಶ್, ಧನುಕಾವೇರಪ್ಪ, ಶ್ರೀ ರಾಮ್ ರೈ ಮತ್ತಿತರರು ಇದ್ದರು.