*ಗೋಣಿಕೊಪ್ಪಲು, ನ. 11: ಕೊಡಗು ಬಲಿಜ ಸಮಾಜದ ಪ್ರಧಾನ ಕಾರ್ಯದರ್ಶಿ, ವೀರಾಜಪೇಟೆ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕಿ ಮೂಲತಃ ಪಾಲಿಬೆಟ್ಟದ ಟಿ.ಸಿ. ಗೀತಾನಾಯ್ಡು ಅವರು ತುಮಕೂರುವಿನ ಗುರುಕುಲ ಪ್ರತಿಷ್ಠಾನದ ವತಿಯಿಂದ ಕೊಡಲ್ಪಡುವ ರಾಜ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ತುಮಕೂರು ರಾಜ್ಯ ಘಟಕದ ಗುರುಕುಲ ಪ್ರತಿಷ್ಠಾನದ ವತಿಯಿಂದ ಜರುಗುವ ಸಾಹಿತ್ಯ, ಕಲೆ, ಭಾಷೆ, ಸಂಸ್ಕೃತಿ, ನಾಟಕ, ಶಿಕ್ಷಕ, ಲಲಿತ ಕಲೆ ಇತ್ಯಾದಿ ಕಾರ್ಯಕ್ರಮಗಳಿಗೆ ಉತ್ತೇಜನ, ಗುರುಕುಲ ಕಲಾ ಪ್ರತಿಷ್ಠಾನದ ಫೇಸ್‍ಬುಕ್ ಖಾತೆಯಲ್ಲಿ ವಿವಿಧ ಚಟುವಟಿಕೆ ಕುರಿತು ಪ್ರಚಾರ ಕಾರ್ಯದ ರಾಜ್ಯಾಧ್ಯಕ್ಷೆಯಾಗಿಯೂ ಕಾರ್ಯ ನಿರ್ವಹಿಸುತ್ತಿದ್ದು, ಪ್ರತಿಷ್ಠಾನದ ರಾಜ್ಯಾಧ್ಯಕ್ಷ ಹೆಚ್.ಲಕ್ಷ್ಮಿನಾರಾಯಣ ಹಾಗೂ ರಾಜ್ಯ ಕಾರ್ಯಾಧ್ಯಕ್ಷ ಡಾ.ಶಿವರಾಜ್ ಗೌಡ ಅವರು ಪ್ರಶಸ್ತಿಗೆ ಆಯ್ಕೆ ಮಾಡಿರುವದಾಗಿ ಮಾಹಿತಿ ನೀಡಿದ್ದಾರೆ.