ಮಡಿಕೇರಿ, ನ. 11: ಕೇಂದ್ರ ರಾಸಾಯನಿಕ ಮತ್ತು ರಸ ಗೊಬ್ಬರ ಇಲಾಖೆ ಸಚಿವ ಡಿ.ವಿ. ಸದಾನಂದ ಗೌಡ ಅವರು ತಾ. 11 ರಂದು ರಾತ್ರಿ ಜಿಲ್ಲೆಗೆ ಆಗಮಿಸಿ ಕುಶಾಲನಗರದಲ್ಲಿ ವಾಸ್ತವ್ಯ ಹೂಡಲಿದ್ದಾರೆ.ತಾ. 12 ರ (ಇಂದಿನ) ಕಾರ್ಯ ಕ್ರಮವನ್ನು ಕಾಯ್ದಿರಿಸಲಾಗಿದ್ದು, ತಾ. 13 ರಂದು ಬೆಳಿಗ್ಗೆ 10 ಗಂಟೆಗೆ ಬೆಂಗಳೂರಿಗೆ ಹಿಂತಿರುಗಲಿದ್ದಾರೆ ಎಂದು ಸಚಿವರ ಆಪ್ತ ಕಾರ್ಯದರ್ಶಿ ಎ. ಜಯಪ್ರಕಾಶ ತಿಳಿಸಿದ್ದಾರೆ.