ಮಡಿಕೇರಿ, ನ. 10: ರಾಜ್ಯದ ರಾಜರಾಜೇಶ್ವರಿ ನಗರ ಹಾಗೂ ಶಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷದ ವತಿಯಿಂದ ವಿಜಯೋತ್ಸವ ಆಚರಿಸಲಾಯಿತು.

ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಮಡಿಕೇರಿ ನಗರ ಬಿಜೆಪಿ ವತಿಯಿಂದ ಇಂದಿರಾಗಾಂಧಿ ವೃತ್ತದಲ್ಲಿ ವಿಜಯೋತ್ಸವ ಆಚರಿಸಿದರು. ಪ್ರಧಾನಿ ಮೋದಿ, ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಪಕ್ಷದ ಪರವಾಗಿ ಘೋಷಣೆ ಕೂಗಿದರು. ಪಟಾಕಿ ರಹಿತವಾಗಿ ಸಾರ್ವಜನಿಕರಿಗೆ ಸಿಹಿ ಹಂಚಿ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ವಕ್ತಾರ ಮಹೇಶ್ ಜೈನಿ, ಜಿಲ್ಲಾ ಉಪಾಧ್ಯಕ್ಷ ಬಿ.ಕೆ. ಅರುಣ್ ಕುಮಾರ್, ಕಾರ್ಯದರ್ಶಿ ಸತೀಶ್, ಮಡಿಕೇರಿ ನಗರಾಧ್ಯಕ್ಷ ಮನು ಮಂಜುನಾಥ್, ಕಾರ್ಯದರ್ಶಿಗಳಾದ ಉಮೇಶ್ ಸುಬ್ರಮಣಿ, ಕಾಳಚಂಡ ಅಪ್ಪಣ್ಣ, ಖಜಾಂಚಿ ಎಸ್. ಮುರುಗನ್, ಕಾರ್ಯದರ್ಶಿ ಬಿ.ಕೆ. ಜಗದೀಶ್, ಮಹಿಳಾ ಮೋರ್ಚಾ ಅಧ್ಯಕ್ಷೆ ಸವಿತಾ ರಾಖೇಶ್, ಯುವ ಮೋರ್ಚಾ ಅಧ್ಯಕ್ಷ ನವೀನ್ ಪೂಜಾರಿ, ನಗರಸಭಾ ಮಾಜಿ ಸದಸ್ಯ ಪಿ.ಡಿ. ಪೊನ್ನಪ್ಪ, ಬಿ.ಎಂ. ರಾಜೇಶ್, ಪುಟಾಣಿಗರ ವಾರ್ಡ್ ಅಧ್ಯಕ್ಷ ವೇಣು ಇತರರು ಪಾಲ್ಗೊಂಡಿದ್ದರು.

ಕುಶಾಲನಗರ: ರಾಜ್ಯದ ಎರಡು ಕಡೆ ನಡೆದ ವಿಧಾನಸಭಾ ಉಪ ಚುನಾವಣೆಯಲ್ಲಿ ಬಿಜೆಪಿ ಜಯ ಗಳಿಸಿದ ಹಿನ್ನೆಲೆಯಲ್ಲಿ ಕುಶಾಲನಗರ ಬಿಜೆಪಿ ಪಕ್ಷದ ವತಿಯಿಂದ ವಿಜಯೋತ್ಸವ ಆಚರಿಸಲಾಯಿತು.

ಪಟ್ಟಣದ ಗಣಪತಿ ದೇವಾಲಯದ ಮುಂದೆ ವಿಜಯೋತ್ಸವ ಆಚರಿಸಿದ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ನರೇಂದ್ರ ಮೋದಿ ಹಾಗೂ ಯಡಿಯೂರಪ್ಪ ಅವರಿಗೆ ಘೋಷಣೆ ಕೂಗಿದರು. ಪಟಾಕಿ ರಹಿತವಾಗಿ ನಡೆದ ವಿಜಯೋತ್ಸವದಲ್ಲಿ ನೆರೆದಿದ್ದವರಿಗೆ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಲಾಯಿತು.

ಈ ಸಂದರ್ಭ ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ, ಕುಶಾಲನಗರ ಪ.ಪಂ. ಅಧ್ಯಕ್ಷ ಜಯವರ್ಧನ್, ಕುಡಾ ಅಧ್ಯಕ್ಷ ಎಂ.ಎಂ. ಚರಣ್, ಸದಸ್ಯರುಗಳಾದ ವಿ.ಡಿ. ಪುಂಡರೀಕಾಕ್ಷ, ವೈಶಾಖ್, ಮಧುಸೂದನ್, ಪ.ಪಂ. ಸದಸ್ಯ ಅಮೃತ್‍ರಾಜ್, ಬಿಜೆಪಿ ಪ್ರಮುಖರಾದ ಜಿ.ಎಲ್. ನಾಗರಾಜ್, ಮಂಡೇಪಂಡ ಬೋಸ್ ಮೊಣ್ಣಪ್ಪ, ಗಣಪತಿ, ನಿಡ್ಯಮಲೆ ದಿನೇಶ್, ರುದ್ರಾಂಬಿಕೆ, ಆದರ್ಶ್, ಚನ್ನಯ್ಯ, ವಿನೀತ್ ಮತ್ತಿತರರು ಇದ್ದರು.

ಇದೇ ಸಂದರ್ಭ ಪಟಾಕಿ ರಹಿತ ದೀಪಾವಳಿ ಆಚರಣೆ ಹಿನ್ನೆಲೆಯಲ್ಲಿ ಸುಧೀರ್, ಮಹಿಳಾ ಮೋರ್ಚ ಅಧ್ಯಕ್ಷೆ ಮಾಂಗೆರ ಡೈನಾ, ಕೃಷಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕಬೀರ್ ದಾಸ್, ಬಲ್ಯಮಂಡೂರು ಸಹ ಪ್ರಮುಖ್ ಚೀರಂಡ ಕಂದ ಸುಬ್ಬಯ್ಯ, ಚಿಕ್ಕಮುಂಡೂರು ಬೂತ್ ಅಧ್ಯಕ್ಷ ಮಲ್ಚಿರ ಉತ್ತಪ್ಪ, ನಡಿಕೇರಿ ಬೂತ್ ಅಧ್ಯಕ್ಷ ಕಳ್ಳಿಚಂಡ ಕೃಷ್ಣ, ಪೆÇನ್ನಂಪೇಟೆ ಕೃಷಿ ಮೋರ್ಚಾ ಅಧ್ಯಕ್ಷ ಅಡ್ಡಂಡ ಮಂದಣ್ಣ, ಗ್ರಾ.ಪಂ. ಸದಸ್ಯರಾದ ಮೂಕಳೇರ ಕಾವ್ಯ, ಲಕ್ಷ್ಮಣ, ದಶಮಿ, ಪಕ್ಷದ ಪ್ರಮುಖರಾದ ಚಿರಿಯಪಂಡ ರಾಜ ನಂಜಪ್ಪ, ಮುದ್ದಿಯಡ ಮಂಜು, ಚೋಡುಮಾಡ ಶ್ಯಾಮ್ ಪೂಣಚ್ಚ, ಚೆಪ್ಪುಡಿರ ವಿವೇಕ್, ಪೆಮ್ಮಂಡ ಭರತ್, ಕಾಕಮಾಡ ಆದರ್ಶ್, ಉಮೇಶ್ ಲೀಮಾ, ವಿದ್ಯಾಶ್ರೀ ಹಾಗೂ ಇನ್ನಿತರ ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದರು