ಮಡಿಕೇರಿ, ನ. 11: ಕೃಷಿ ಇಲಾಖೆ ವತಿಯಿಂದ ಬೀಜೋಪಚಾರ ಆಂದೋಲನ ಹಾಗೂ ಸುರಕ್ಷಿತ ಕೀಟನಾಶಕಗಳ ಬಳಕೆಯ ಬಗ್ಗೆ ತರಬೇತಿ ಕಾರ್ಯಕ್ರಮವನ್ನು ತಾ. 12 ರಂದು (ಇಂದು) ಬೆಳಿಗ್ಗೆ 11 ಗಂಟೆಗೆ ಪೆರಾತ ಫ್ರೆಂಡ್ಸ್ ಯುವಕ ಸಂಘ (ರಿ) ಅರ್ವತ್ತೋಕ್ಲು ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ.
ಉದ್ಘಾಟನೆಯನ್ನು ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್ ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಬೆಟ್ಟಗೇರಿ ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿ ಜಿ.ಆರ್. ಗಣೇಶನ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ತಾ.ಪಂ. ಸದಸ್ಯೆ ತುಂತಜೆ ಕುಮುದ, ತಳೂರು ಎ. ಕಿಶೋರ್ ಕುಮಾರ್ - ಕೃಷಿಕ ಸಮಾಜ ಸದಸ್ಯರು ಹಾಗೂ ಅಧ್ಯಕ್ಷರು, ಪಿ.ಎ.ಸಿ.ಎಸ್. ಬೆಟ್ಟಗೇರಿ, ಪೆರಾತ ಫ್ರೆಂಡ್ಸ್ ಯುವಕ ಸಂಘದ ಅಧ್ಯಕ್ಷ ಬಿ.ಎಂ. ದಿಲೀಪ್ ಭಾಗವಹಿಸಲಿದ್ದಾರೆ. ತಾಂತ್ರಿಕ ಮಾಹಿತಿಯನ್ನು ಡಾ. ಬಸವಲಿಂಗಯ್ಯ- ವಿಜ್ಞಾನಿಗಳು, ಕೃಷಿ ಸಂಶೋಧನಾ ಕೇಂದ್ರ ಮಡಿಕೇರಿ ನೀಡಲಿದ್ದಾರೆ.