ಮಡಿಕೇರಿ, ನ. 11: ಪೌತಿ ಖಾತೆ ಆಂದೋಲನಕ್ಕೆ ಸಂಬಂಧಿಸಿದಂತೆ ಅಮ್ಮತ್ತಿ ಹೋಬಳಿಯ ಗ್ರಾಮಗಳಾದ ಚೆನ್ನಯ್ಯನಕೋಟೆ, ಚೆನ್ನಂಗಿ, ಗೂಡ್ಲೂರು ಮೂಡಬಯಲುಗಳಲ್ಲಿ ಕಂದಾಯ ಪರಿವೀಕ್ಷಕರು ಹಾಗೂ ಗ್ರಾಮಲೆಕ್ಕಿಗರು ಮನೆಮನೆಗೆ ತೆರಳಿ ಪೌತಿ ಖಾತೆಯ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಗ್ರಾಮಸ್ಥರು ಸರಿಯಾಗಿ ಮಾಹಿತಿ ನೀಡಿ ಸಹಕರಿಸುವಂತೆ ಎಂ.ಎಲ್ ನಂದೀಶ್ ತಿಳಿಸಿದ್ದಾರೆ.