ಮಡಿಕೇರಿ, ನ. 11: ಚಿಕ್ಕತ್ತೂರು ನಿವಾಸಿ ಮೀನಾಕ್ಷಿ (35) ಹಾಗೂ ಆಕೆಯ ಪುತ್ರಿ ಕಾಣೆಯಾಗಿದ್ದು ಮೀನಾಕ್ಷಿಯ ಪತಿ ಮಲ್ಲೇಶ ಅವರು ಕುಶಾಲನಗರ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ. ಆಗಸ್ಟ್ 28 ರಂದು ರಾತ್ರಿಯ ವೇಳೆ ತಾಯಿ-ಮಗಳು ಇಬ್ಬರೂ ಮನೆಯಿಂದ ಯಾರಿಗೂ ಹೇಳದೆ ತೆರಳಿದ್ದು ಇಂದಿನವರೆಗೂ ಪತ್ತೆಯಾಗಿಲ್ಲ ಎಂದು ಪತಿ ಮಲ್ಲೇಶ ದೂರು ನೀಡಿದ್ದಾರೆ. ಕಾಣೆಯಾದವರ ಕುರಿತು ಮಾಹಿತಿ ದೊರೆತಲ್ಲಿ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆ – ದೂ.08276-278433 ಗೆ ತಿಳಿಸುವಂತೆ ಕೋರಿದೆ.