*ಕೊಡ್ಲಿಪೇಟೆ, ನ.11: ಕೊಡ್ಲಿಪೇಟೆ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಆಡಳಿತ ಮಂಡಳಿ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಸಿ.ವಿ.ಶಂಭುಲಿಂಗಪ್ಪ, ಉಪಾಧ್ಯಕ್ಷರಾಗಿ ಭುವನೇಶ್ ಕ್ಯಾತೆ ಅವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಂಘದ ಕಚೇರಿಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ಈ ಹಿಂದೆ ನಡೆದಿದ್ದ ನಿರ್ದೇಶಕರುಗಳ ಚುನಾವಣೆಯಲ್ಲಿ ಸಾಮಾನ್ಯ ಕ್ಷೇತ್ರದ ಎರಡು ಸ್ಥಾನ ಹೊರತುಪಡಿಸಿ ಉಳಿದ ಎಲ್ಲಾ ಮೀಸಲು ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ನಡೆದಿತ್ತು. ಜಿಲ್ಲಾ ಸಹಕಾರ ಬ್ಯಾಂಕಿನ ಪ್ರತಿನಿಧಿಯಾಗಿ ಬಿ.ಕೆ.ಚಿಣ್ಣಪ್ಪ ಮತ್ತು ಬೆಸೂರು ಪ್ರಾ.ಕೃ.ಪ.ಸ.ಸಂಘದ ಪ್ರತಿನಿಧಿಗಳಾಗಿ ಬಿ.ಪಿ.ಆಶೋಕ್ ಕುಮಾರ್, ಶಿವಣ್ಣ, ಧವಸ ಭಂಡಾರ ದಿಂದ ಮೊಹನ್, ಮೀಸಲು ಕ್ಷೇತ್ರಗಳಿಂದ ನೇತ್ರಾವತಿ, ಚಿನ್ನಮಣಿ, ಹಿಂದುಳಿದ ವರ್ಗ ಮೀಸಲಿನಿಂದ ಸವಿತಾ ಸಮಾಜದ ಹೆಚ್.ಆರ್.ರಾಮಕೃಷ್ಣ, ದೇವಾಂಗ ಯತೀಶ್, ಪರಿಶಿಷ್ಟ ಜಾತಿ ಮೀಸಲಿನಿಂದ ಭುವನೇಶ್ ಕ್ಯಾತೆ ಅವಿರೋಧವಾಗಿ ಆಯ್ಕೆಯಾಗಿದ್ದರು.
ಚುನಾವಣಾ ಅಧಿಕಾರಿಯಾಗಿ ಸಹಕಾರ ಸಂಘದ ಉಪ ನಿಬಂಧಕರ ಕಚೇರಿಯ ನರಸಿಂಹ ಮೂರ್ತಿ ಭಾಗವಹಿಸಿದ್ದರು. ಸಂಘದ ವ್ಯವಸ್ಥಾಪಕ ಕೆ.ಆರ್ .ವಿರೂಪಾಕ್ಷಯ್ಯ ಉಪಸ್ಥಿತರಿದ್ದರು.