ವೀರಾಜಪೇಟೆ, ನ. 11: ವೀರಾಜಪೇಟೆ ಬಳಿಯ ಬಿಳುಗುಂದ ಗ್ರಾಮದ ಬಿ.ದೇವಯ್ಯ ಎಂಬವರ ಲೈನ್‍ಮನೆಯಲ್ಲಿ ವಾಸವಿದ್ದ ಪಂಜರಿ ಎರವರ ಮುತ್ತ ಎಂಬಾತ ಪಕ್ಕದ ಮನೆಯ 21 ವರ್ಷದ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ದೂರಿನ ಮೇರೆ ಇಲ್ಲಿನ ಗ್ರಾಮಾಂತರ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಆರೋಪಿ ಮುತ್ತ ಪಕ್ಕದ ಮನೆ ಮಹಿಳೆಯೊಂದಿಗೆ ತಾ.8-11-20 ರಂದು ಮನೆಯಲ್ಲಿ ಯಾರೂ ಇಲ್ಲದ ಸಮಯವನ್ನು ಸಾಧಿಸಿ ಅಕ್ರಮ ಸಂಬಂಧ ಹೊಂದಿದ್ದರ ಕುರಿತು ಮುತ್ತನ ಹೆಂಡತಿ ಅನಿತಾಳಿಗೆ ಇಂದು ಗೊತ್ತಾಗಿದ್ದು, ಇದರಿಂದಾಗಿ ಆಕೆ ಆತ್ಮಹತ್ಯೆಗಾಗಿ ಕೀಟ ನಾಶಕ ಔಷಧಿ ಸೇವಿಸಿದ್ದಾಳೆ. ಈ ವಿಷಯವನ್ನು ಆಕೆಯ ಸಂಗಾತಿ ಲಕ್ಷ್ಮಿಗೆ ತಿಳಿಸಿ ಪೊಲೀಸರಿಗೆ ದೂರು ನೀಡಿದ್ದರಿಂದ ಪೊಲೀಸರು ಐ.ಪಿ.ಸಿ 376 ಪ್ರಕಾರ ಪ್ರಕರಣ ದಾಖಲಿಸಿದ್ದಾರೆ.

ಮುತ್ತನ ಹೆಂಡತಿ ಅನಿತಾ ಕುಶಾಲನಗರದ ಸಂಬಂಧಿಕರ ಮನೆಗೆ ತೆರಳಿದ್ದಾಗ ಈ ಅಕ್ರಮ ಸಂಬಂಧ ನಡೆದಿರುವುದು ಗೊತ್ತಾಗಿದೆ.