ಗೋಣಿಕೊಪ್ಪಲು, ನ.11: ಪೊನ್ನಂಪೇಟೆ ಹೋಬಳಿಯ ವಿವಿಧ ಭಾಗದಲ್ಲಿ ತಾ.12 (ಇಂದು) ಪೌತಿಖಾತೆ ಆಂದೋಲನ ಹಮ್ಮಿಕೊಳ್ಳಲಾಗಿದ್ದು, ಹಾತೂರು ಪಂಚಾಯ್ತಿ ವ್ಯಾಪ್ತಿಯ ಕುಂದ ಈಚೂರು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕುಂದ, ಅರುವತೋಕ್ಲು ಗ್ರಾಮ ಪಂಚಾಯ್ತಿಯ ಅರುವತೋಕ್ಲು ಮತ್ತು ಕಿರುಗೂರು ಗ್ರಾಮ ಪಂಚಾಯ್ತಿಯ ಮಹಿಳಾ ಸಮಾಜ, ದೇವರಪುರ ಗ್ರಾಮ ಪಂಚಾಯ್ತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೌತಿಖಾತೆ ಆಂದೋಲನ ಹಮ್ಮಿಕೊಳ್ಳಲಾಗಿದೆ. ಸಂಬಂಧಪಟ್ಟ ಗ್ರಾಮಸ್ಥರು ಪೌತಿಖಾತೆಗೆ ಅರ್ಜಿ ಸಲ್ಲಿಸಬಹುದು ಎಂದು ಪೊನ್ನಂಪೇಟೆ ಕಂದಾಯ ಪರಿವೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಜಮೀನು ಹೊಂದಿರುವ ರೈತಾಪಿ ವರ್ಗದವರು, ಸಾರ್ವಜನಿಕರು ನಿಗದಿತ ನಮೂನೆಯಲ್ಲಿ ಅರ್ಜಿಗಳನ್ನು ಖಾತೆದಾರರು ಮೃತರಾದಲ್ಲಿ ಪಹಣಿ, ಮರಣ ದೃಢೀಕರಣಪತ್ರ ವಂಶಾವಳಿ, ಪಡಿತರ ಚೀಟಿ, ಆಧಾರ್ ಕಾರ್ಡ್‍ನೊಂದಿಗೆ ಸಲ್ಲಿಸಬಹುದೆಂದು ತಿಳಿಸಿದ್ದಾರೆ.