ಗೋಣಿಕೊಪ್ಪಲು, ನ. 9: ಇತ್ತಿಚೀನ ದಿನಗಳಲ್ಲಿ ಅಧಿಕ ಭಾರ ತುಂಬಿಕೊಂಡು ಲಾರಿಗಳು ಓಡಾಟ ನಡೆಸುತ್ತಿರುವುದರಿಂದ ರಸ್ತೆಗಳು ಹಾಳಾಗುತ್ತಿವೆ. ಈ ಹಿನ್ನೆಲೆಯಲ್ಲಿ ಕುಟ್ಟ ವೃತ್ತದ ನಿರೀಕ್ಷಕ ಪರಶಿವಮೂರ್ತಿ ಅವರು ಅಂತಹ ಲಾರಿಗಳನ್ನು ಪತ್ತೆ ಹಚ್ಚಿ ದಂಡ ವಿಧಿಸಿದ್ದಾರೆ.
ಹುದಿಕೇರಿ ವ್ಯಾಪ್ತಿಯಲ್ಲಿ ವಾಹನ ತಪಾಸಣೆ ಮಾಡುತ್ತಿದ್ದ ಸಂದರ್ಭ ಶ್ರೀಮಂಗಲ ಕಡೆಯಿಂದ ಭಾರೀ ಪ್ರಮಾಣದಲ್ಲಿ ಟಿಂಬರ್ ತುಂಬಿಕೊಂಡು ಬರುತ್ತಿದ್ದ ಲಾರಿಯನ್ನು ತಪಾಸಣೆ ಮಾಡಿದಾಗ ಸರಕಾರದ ನಿಯಮಗಳನ್ನು ಮೀರಿ 40 ಟನ್‍ಗೂ ಅಧಿಕ ಭಾರ ಹೊತ್ತು ತಂದ ಲಾರಿ ಚಾಲಕ ತಮಿಳುನಾಡಿನ ಗೋಕುಲ ಕಣ್ಣನ್ ಎಂಬಾತನನ್ನು ವಿಚಾರಣೆಗೆ ಒಳಪಡಿಸಿ 20 ಸಾವಿರ ದಂಡ ವಿಧಿಸಿದ್ದಾರೆ.