ಮಡಿಕೇರಿ, ನ. 9: ಇಲ್ಲಿನ ಕೊಡಗು ಜಿಲ್ಲಾ ಕೈಗಾರಿಕಾ ಉತ್ಪಾದನಾ ಮತ್ತು ಮಾರಾಟ ಸಹಕಾರ ಸಂಘದ ಅಧ್ಯಕ್ಷರಾಗಿ ಸಿ.ವಿ. ನಾಗೇಶ್ ಹಾಗೂ ಉಪಾಧ್ಯಕ್ಷರಾಗಿ ಫಾತಿಮಾ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಇಂದು ಚುನಾವಣಾಧಿಕಾರಿ ಎಂ.ಎಸ್. ರಘು ಅವರು ಆಡಳಿತ ಮಂಡಳಿ ನಿರ್ದೇಶಕರುಗಳ ಸಮ್ಮುಖದಲ್ಲಿ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು.

ಉಭಯ ಸ್ಥಾನಗಳಿಗೆ ಅವಿರೋಧ ಆಯ್ಕೆಯೊಂದಿಗೆ ನೂತನ ಪದಾಧಿಕಾರಿಗಳಿಗೆ ಇತರರು ಶುಭಾಶಯ ವಿನಿಮಯ ಮಾಡಿಕೊಂಡರು. ನಿರ್ಗಮಿತ ಅಧ್ಯಕ್ಷೆ ಮುಂಡ್ಯೋಳಂಡ ಲಲಿತಾ ಗಣಪತಿ, ನಿರ್ದೇಶಕರುಗಳಾದ ಹೊಸೂರು ಸತೀಶ್‍ಕುಮಾರ್ ಜೋಯಪ್ಪ, ಸಿ.ಎನ್. ಯಶವಂತ್, ಆಶಾ ಚಿಣ್ಣಪ್ಪ, ಜೇಕಬ್ ಮೊದಲಾದವರು ಉಪಸ್ಥಿತ ರಿದ್ದು, ಸಂಸ್ಥೆಯನ್ನು ಮುಂದಿನ 5 ವರ್ಷಗಳಲ್ಲಿ ಇನ್ನಷ್ಟು ಬಲಿಷ್ಠ ಗೊಳಿಸುವಂತೆ ಸಲಹೆ ನೀಡಿದರು.

ಪ್ರತಿಯಾಗಿ ಮಾತನಾಡಿದ ಅಧ್ಯಕ್ಷ ಸಿ.ವಿ. ನಾಗೇಶ್ ಅವರು, ಎಲ್ಲರ ಸಹಕಾರದೊಂದಿಗೆ ಜಿಲ್ಲಾ ಕೈಗಾರಿಕಾ ಸಂಸ್ಥೆ ಹಾಗೂ ಕೊಡಗು ಜಿಲ್ಲಾಡಳಿತದ ಮಾರ್ಗದರ್ಶನದಲ್ಲಿ; ಕೊರೊನಾ ನಡುವೆ ಸಂಕಷ್ಟದಲ್ಲಿರುವ ಸಣ್ಣ ಉದ್ಯಮಗಳ ಪುನಶ್ಚೇತನಕ್ಕೆ ಪ್ರಾಮಾಣಿಕ ನೆಲೆಗಟ್ಟಿನಲ್ಲಿ ಶ್ರಮಿಸುವದಾಗಿ ಭರವಸೆ ನೀಡಿದರು.

ಜಿಲ್ಲೆಯಲ್ಲಿ ಕಾರ್ಯನಿರ್ವ ಹಿಸುತ್ತಿರುವ ಸಣ್ಣ ಉದ್ದಿಮೆಗಳು ತಯಾರಿಸುವ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆಯನ್ನು ಕೊಡಗಿನಲ್ಲಿಯೇ ಕಲ್ಪಿಸಲು ಜಿ.ಪಂ. ಹಂತದಲ್ಲಿ ಪ್ರಯತ್ನಿಸುವದಾಗಿ ಅವರು ನುಡಿದರು. ಉಪಾಧ್ಯಕ್ಷೆ ಫಾತಿಮಾ ಮಾತನಾಡಿ, ಆಡಳಿತ ಮಂಡಳಿಯ ಸರ್ವ ಸದಸ್ಯರು ಹಾಗೂ ಅಧಿಕಾರಿಗಳ ಸಹಕಾರದಿಂದ ಉತ್ತಮ ಕೆಲಸ ಮಾಡುವ ಭರವಸೆ ನೀಡಿದರು. ಇಲಾಖೆಯ ಅಧಿಕಾರಿ ಗಳಾದ ರೋಷನ್ ಕಾಳಪ್ಪ, ಸಿ.ಎನ್. ರಘು, ವ್ಯವಸ್ಥಾಪಕ ಕಾರ್ಯಪ್ಪ ಮೊದಲಾದವರು ಉಪಸ್ಥಿತರಿದ್ದರು.