ಕೂಡಿಗೆ, ನ. 8: ಹೆಬ್ಬಾಲೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಪೌತಿ, ವಾರಸಾ ಖಾತೆ ಅಂದೋಲನ ಕಾರ್ಯಕ್ರಮವು ಕಂದಾಯ ಇಲಾಖೆಯ ಮೂಲಕ ಹೆಬ್ಬಾಲೆ ಸರಕಾರಿ ಶಾಲಾ ಆವರಣದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಕುಶಾಲನಗರ ಕಂದಾಯ ಉಪ ತಹಶೀಲ್ದಾರ್ ಶುಭ ನೆರವೇರಿಸಿದರು
ಈ ಕಾರ್ಯಕ್ರಮದ ಸಮಗ್ರ ಮಾಹಿತಿಯನ್ನು ಕಂದಾಯ ಇಲಾಖೆಯ ಪರಿವೀಕ್ಷಕ ಸಂತೋಷ ನೀಡಿದರು. ಅದರಂತೆ ರೈತರು ನಮೂನೆ- 1_ರಲ್ಲಿ ಪೌತಿ ಖಾತೆ ಕುರಿತು ಅರ್ಜಿ. ಖಾತೆದಾರರು ಮೃತರಾಗಿರುವ ಸರ್ವೆ ನಂಬರ್ ಪಹಣೆ , ಮೃತರ ಸಮರ್ಥನೆ ಪತ್ರ , ವಂಶವೃಕ್ಷ, ಪಡಿತರ ಚೀಟಿ ಮತ್ತು ಆಧಾರ ಕಾರ್ಡ್ ಸೇರಿದಂತೆ 15 ಮಂದಿ ಅರ್ಜಿಯನ್ನು ಸಲ್ಲಿಸಿದ್ದರು. ಗ್ರಾಮ ಲೆಕ್ಕಾಧಿಕಾರಿ ಸಚಿನ್ ಕುಲಗಣಿ ಸೇರಿದಂತೆ ಇಲಾಖೆಯ ಸಿಬ್ಬಂದಿ ವರ್ಗ ಮತ್ತು ಗ್ರಾಮಸ್ಥರು ಹಾಜರಿದ್ದರು.