ಗೋಣಿಕೊಪ್ಪಲು, ನ.8: ಆದಿವಾಸಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಖುದ್ದಾಗಿ ಪರಿಶೀಲಿಸಿದ ಕೆಪಿಸಿಸಿ ವಕ್ತಾರ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಇವುಗಳ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ವೀರಾಜಪೇಟೆ ತಾಲೂಕಿನ ಕೋತೂರು ಸಮೀಪದ ಬೊಮ್ಮಾಡು ಆದಿವಾಸಿಗಳ ಹಾಡಿಗೆ ಭೇಟಿ ನೀಡಿದ ಪೊನ್ನಣ್ಣ ಆದಿವಾಸಿಗಳ ಸಮಸ್ಯೆಗಳನ್ನು ಆಲಿಸಿದರು. ಸ್ವಾತಂತ್ರ್ಯ ಪೂರ್ವದಿಂದಲೂ ಅರಣ್ಯವನ್ನು ನಂಬಿ ಬದುಕಿದ ಜನರಿಗೆ ಇದೀಗ ಅರಣ್ಯ ಹಕ್ಕು ಕಾಯ್ದೆಯಿಂದ ಸಿಗಬೇಕಾದ ಸವಲತ್ತುಗಳು ಸಿಗದಂತಾಗಿದೆ. ರಾಜಕೀಯ ಪಕ್ಷಗಳು ಬಡವರ ಪರ ಧ್ವನಿ ಎತ್ತದೆ ಇರುವ ಬಗ್ಗೆ ಹಾಡಿಯ ಮುಖಂಡ ಜೆ.ಎಂ.ಸೋಮಯ್ಯ ತಮ್ಮ ಅಳಲನ್ನು ತೋಡಿಕೊಂಡರು. ಕೇವಲ ಐದು ಹತ್ತು ಸೆಂಟು ಭೂಮಿಗೆ ಸೀಮಿತಗೊಳಿಸಿ ನಮ್ಮ ಹಕ್ಕನ್ನು ಕಸಿದು ಕೊಂಡಿದ್ದಾರೆ. ಒಂದು ಕುಟುಂಬಕ್ಕೆ ಕನಿಷ್ಟ 5 ಎಕರೆ ಜಮೀನು ನೀಡಬೇಕೆಂಬ ಆದೇಶವಿದ್ದರೂ ಇವುಗಳನ್ನು ನೀಡದೇ ಕೆಲ ನೆಪ ಹೇಳುತ್ತಾ ಆಧಿಕಾರಿಗಳು ಸಮಯವನ್ನು ಕಳೆಯುತ್ತಿದ್ದಾರೆ.
ಸರಿಯಾದ ಮೂಲಭೂತ ಸೌಕರ್ಯಗಳು ಮರೀಚಿಕೆಯಾಗಿವೆ ಎಂದು ಅಸಮಾಧಾನವನ್ನು ವ್ಯಕ್ತಪಡಿಸಿದರು. ಬ್ರಹ್ಮಗಿರಿ ಹಾಡಿಯ ಮುಖಂಡ ಉದಯ ಮಾತನಾಡಿ ಆದಿವಾಸಿಗಳು ನಿರಂತರ ಹೋರಾಟ ದಿಂದ ಒಂದಷ್ಟು ಸಮಸ್ಯೆಗಳಿಗೆ ಪರಿಹಾರ ಲಭಿಸಿದೆ. ಪ್ರಮುಖವಾಗಿ ಸಿಗಬೇಕಾದ ಸವಲತ್ತುಗಳನ್ನು ನ್ಯಾಯಾಂಗ ಹೋರಾಟದ ಮೂಲಕ ಪಡೆಯಬೇಕಾದ ಪರಿಸ್ಥಿತಿ ನಮ್ಮ ಮುಂದಿದೆ ಎಂದರು.
ಆದಿವಾಸಿಗಳ ಸಮಸ್ಯೆಗಳನ್ನು ಆಲಿಸಿದ ಎ.ಎಸ್.ಪೊನ್ನಣ್ಣ ಆದಿವಾಸಿಗಳ ಅನುಕೂಲಕ್ಕಾಗಿ ಕಾಂಗ್ರೆಸ್ ಸರ್ಕಾರದÀ ಪ್ರಧಾನಿ ಮನಮೋಹನ್ ಸಿಂಗ್ ಅವಧಿಯಲ್ಲಿ ಅರಣ್ಯ ಹಕ್ಕು ಮಸೂದೆಯನ್ನು ತರಲಾಯಿತು. ಆದರೆ ಕೊಡಗಿನಲ್ಲಿರುವ ಆದಿವಾಸಿಗಳ ಬದುಕಿಗೆ ಆಸರೆಯಾಗಬೇಕಾಗಿದ್ದ ಈ ಕಾಯ್ದೆಯು ಸ್ಥಳೀಯ ಜನ ಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಸಾಕಾರ ಗೊಳ್ಳಲಿಲ್ಲ. ಕಳೆದ 20 ವರ್ಷಗಳಿಂದ ಜಿಲ್ಲೆಯಲ್ಲಿ ಬಿಜೆಪಿ ಸರ್ಕಾರ ಇರುವುzರಿಂದÀ ಇವರಿಗೆ ಆದಿವಾಸಿಗಳು ಎದುರಿಸುತ್ತಿರುವ ಕಷ್ಟಗಳು ಇನ್ನೂ ಮನವರಿಕೆಯಾಗಿಲ್ಲ.
ಅರಣ್ಯ ಹಕ್ಕು ಕಾಯ್ದೆಯನ್ನು ಬಿಜೆಪಿ ಸರ್ಕಾರ ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಲು ಅಧಿಕಾರಿಗಳ ಮೂಲಕ ಮನಸ್ಸು ಮಾಡುತ್ತಿಲ್ಲ ಜೊತೆಗೆ ಅಧಿಕಾರಿಗಳು ಈ ಬಗ್ಗೆ ಆಸಕ್ತಿ ವಹಿಸದಿರುವುದರಿಂದ, ಹೋರಾಟ ರೂಪಿಸುವ ಅನಿವಾರ್ಯತೆ ನಮ್ಮ ಮುಂದಿದೆ. ಇದು ಕಾನೂನು ಹೋರಾಟವಾಗಬೇಕೇ, ಅಥವಾ ಸರ್ಕಾರದ ಮುಂದೆ ಪ್ರತಿಭಟಿಸಬೇಕೇ ಎಂಬ ಬಗ್ಗೆ ಮುಂದೆ ನಿರ್ಧಾರ ಕೈಗೊಳ್ಳಬೇಕಾಗಿದೆ ಎಂದರು.
ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್‍ನ ಅಧ್ಯಕ್ಷ ಮೀದೇರಿರ ನವೀನ್, ಕಾರ್ಯದರ್ಶಿ ಬಾಲಕೃಷ್ಣ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಿ.ಎನ್.ಪೃಥ್ವಿ, ಮುಕ್ಕಾಟೀರ ಶಿವು ಮಾದಪ್ಪ, ತಾ.ಪಂ.ಸದಸ್ಯ ಪಲ್ವಿನ್ ಪೂಣಚ್ಚ, ವಲಯ ಕಾಂಗ್ರೆಸ್ ಅಧ್ಯಕ್ಷ ತೀತಿರ ಕಟ್ಟಿ, ಡಿಸಿಸಿ ಸದಸ್ಯರಾದ ಕೊಲ್ಲಿರ ಬೋಪಣ್ಣ, ಕಡೇಮಾಡ ಕುಸುವiಜೋಯಪ್ಪ ಸೇರಿದಂತೆ ಮುಂತಾದವರು ಹಾಜರಿದ್ದರು.