ಶನಿವಾರಸಂತೆ, ನ. 8: ಸಮೀಪದ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯಲ್ಲಿ ಕಾಡಾನೆಗಳ ದಾಂಧಲೆ ನಿರಂತರವಾಗಿ ನಡೆಯುತ್ತಿದ್ದು, ಬೆಳೆ ನಾಶದಿಂದ ರೈತರು ಕಂಗಾಲಾಗಿದ್ದಾರೆ.
ಸಮೀಪದ ಬೆಸೂರು ಗ್ರಾ.ಪಂ. ವ್ಯಾಪ್ತಿಯ ಮಾಗಡಹಳ್ಳಿ ಗ್ರಾಮದಲ್ಲಿ ಮಧ್ಯರಾತ್ರಿ ವೇಳೆ 15 ಆನೆಗಳ ಹಿಂಡು ದಾಳಿ ನಡೆಸಿ 5 ಎಕರೆ ಗದ್ದೆಯಲ್ಲಿ ಕೃಷಿ ಮಾಡಿದ್ದ ಭತ್ತದ ಬೆಳೆಯನ್ನು ನಾಶಪಡಿಸಿವೆ. ಈ ಗಡಿಭಾಗದಲ್ಲಿ ಆನೆ-ಮಾನವ ಸಂಘರ್ಷ ಹೊಸದೇನಲ್ಲ. ಅಪಾರ ಸಾವು-ನೋವು ಸಂಭವಿಸಿದೆ. ಕಾಡಾನೆಗಳು ತೋಟ, ಗದ್ದೆಗಳಿಗೆ ನುಗ್ಗಿ ಬೆಳೆ ನಾಶಪಡಿಸಿವೆ. ಆದರೆ, ಬೆಳೆ ನಷ್ಟವಿರಲಿ, ಪ್ರಾಣಹಾನಿಯಾದವರಿಗೂ ಈವರೆಗೆ ಸೂಕ್ತ ಶಾಶ್ವತ ಪರಿಹಾರ ಲಭಿಸಿಲ್ಲ ಎಂಬದು ಇಲ್ಲಿನ ರೈತರ ಅಳಲು.
ಅತಿವೃಷ್ಟಿ-ಅನಾವೃಷ್ಟಿ ಕಾಲದಲ್ಲೂ ಕಷ್ಟಪಟ್ಟು ಬೆಳೆದ ಬೆಳೆ ಕುಯ್ಲಿಗೆ ಬರುವ ಶನಿವಾರಸಂತೆ, ನ. 8: ಸಮೀಪದ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯಲ್ಲಿ ಕಾಡಾನೆಗಳ ದಾಂಧಲೆ ನಿರಂತರವಾಗಿ ನಡೆಯುತ್ತಿದ್ದು, ಬೆಳೆ ನಾಶದಿಂದ ರೈತರು ಕಂಗಾಲಾಗಿದ್ದಾರೆ.