ವೀರಾಜಪೇಟೆ, ನ. 7: ನಶೆ ಬರಿಸುವ ಮಾತ್ರೆಗಳನ್ನು ಖರೀದಿಸಿ ಉಪಯೋಗಿಸುತಿದ್ದ ಐವರು ಯುವಕರನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ವೀರಾಜಪೇಟೆ ನಗರದಲ್ಲಿ ನಡೆದಿದೆ.

ನಗರದ ತಾಲೂಕು ಮೈದಾನದ ಸಿಮೆಂಟು ಮೆಟ್ಟಿಲುಗಳ ಮೇಲೆ ಅನುಮಾನಾಸ್ಪದವಾಗಿ ಕುಳಿತು ಕೊಂಡು ಸಿರಿಂಜ್ ಬಳಕೆ ಮಾಡಲಾ ಗುತ್ತಿದೆ ಎಂದು ಸಾರ್ವಜನಿಕರೊಬ್ಬರು ನೀಡಿದ ಮಾಹಿತಿ ಮೇರೆಗೆ ವೀರಾಜಪೇಟೆ ನಗರ ಪೆÇಲೀಸರು ಧಾಳಿ ನಡೆಸಿ ವೀರಾಜಪೇಟೆ ನಗರದ ಇಬ್ಬರು ಯುವಕರು ಮತ್ತು ಕುಶಾಲನಗರದ ಇಬ್ಬರು ಯುವಕರು ಹಾಗೂ ಮೈಸೂರು ಜಿಲ್ಲೆಯ ಕೊಪ್ಪದ ಓರ್ವ ಸೇರಿದಂತೆ ಐವರನ್ನು ವಶಕ್ಕೆ ಪಡೆದು ಮಾದಕ ವಸ್ತುಗಳ ನಿಯಂತ್ರಣಾಧಿಕಾರಿಗಳ ವಶಕ್ಕೆ ಒಪ್ಪಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.ಪೊಲೀಸರ ದಾಳಿ ಸಂದರ್ಭ ಸ್ಥಳದಲ್ಲಿದ್ದ ಯುವಕರು ನಶೆ ಬರಿಸುವ ಮಾತ್ರೆಗಳು, ಸಿರಿಂಜ್‍ಗಳನ್ನು ಬಳಸುತ್ತಿದ್ದುದು ಬೆಳಕಿಗೆ ಬಂದಿದೆ. ಯುವಕರನ್ನು ಠಾಣೆಗೆ ಕರೆದೊಯ್ದು ವಿಚಾರಿಸಿದಾಗ ವೈದ್ಯರು ನೀಡುವ ಚೀಟಿ ಇಲ್ಲದೆ

(ಮೊದಲ ಪುಟದಿಂದ) ಅಕ್ರಮವಾಗಿ ಕೊಡಗು ಜಿಲ್ಲೆ ಸೇರಿದಂತೆ ಮೈಸೂರು ಮತ್ತು ಹಾಸನ ಜಿಲ್ಲೆಯ ಪ್ರತಿಷ್ಠಿತ ಔಷಧಿ ಮಳಿಗೆಗಳಿಂದ ಮಾದಕ ವಸ್ತುಗಳನ್ನು ತಮ್ಮ ಉಪಯೋಗಕ್ಕೆ ಬಳಸಿ, ಇತರರಿಗೆ ಮಾರಾಟ ಮಾಡುವ ಉದ್ದೇಶದಿಂದ ಖರೀದಿಸಲಾಗಿದೆ ಎಂದು ವಿಚಾರಣೆ ವೇಳೆ ಯುವಕರು ಒಪ್ಪಿಕೊಂಡಿದ್ದಾರೆ. ಪೊಲೀಸರು ಯುವಕರಿಂದ ಟೆಪೆಂಟಡಾಲ್ 50 ಎಂ.ಜಿಯ 124 ಮಾತ್ರೆಗಳು, ಸ್ಟೀರ್ಲಿ ವಾಟರ್ 10 ಎಂ.ಎಲ್ ಮತ್ತು 25 ಎಂ.ಎಲ್ ನ 5 ಸಿರಿಂಜ್‍ಗಳನ್ನು ವಶಕ್ಕೆ ಪಡೆದುಕೊಂಡು ಜಿಲ್ಲಾ ಔಷಧಿ ನಿಯಂತ್ರಣಾಧಿಕಾರಿಗಳ ಮುಂದೆ ಹಾಜರುಪಡಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಡಿ.ವೈಎಸ್ಪಿ ಸಿ.ಟಿ ಜಯಕುಮಾರ್ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಕ್ಯಾತೆಗೌಡ ನಿರ್ದೇಶನದಲ್ಲಿ ವೀರಾಜಪೇಟೆ ನಗರ ಪೆÇಲೀಸ್ ನಿರೀಕ್ಷಕ ಜಗದೀಶ್ ದೂಳ್ ಶೆಟ್ಟಿ ಮತ್ತು ಅಪರಾಧ ವಿಭಾಗದ ನಿರೀಕ್ಷಕ ಬೋಜಪ್ಪ ಹಾಗೂ ಸಿಬ್ಬಂದಿಗಳಾದ ಮುಸ್ತಫಾ, ಗಿರೀಶ್ ಮತ್ತು ಎನ್.ಎಸ್ .ಲೊಕೇಶ್ ಇವರುಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.