*ಸಿದ್ದಾಪುರ, ನ. 8: ಚೆಟ್ಟಳ್ಳಿ ಗ್ರಾ.ಪಂ. ವ್ಯಾಪ್ತಿಯ ಕೂಡ್ಲೂರು-ಚೆಟ್ಟಳ್ಳಿ ಕೆರೆಯ ಎಡಭಾಗದ ಮುಖ್ಯ ರಸ್ತೆಯಲ್ಲಿ ತಡೆಗೋಡೆ ಕಾಮಗಾರಿ ಭರದಿಂದ ಸಾಗಿದ್ದು, ಸೋಮವಾರ ಪೇಟೆ ತಾ.ಪಂ. ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ ಪರಿಶೀಲಿಸಿದರು.
ಹಳೆಯ ತಡೆಗೋಡೆ ಕುಸಿಯುವ ಹಂತದಲ್ಲಿದ್ದ ಕಾರಣ ಶಾಸಕ ಅಪ್ಪಚ್ಚು ರಂಜನ್ ಅವರ ಅನುದಾನದ ನೂತನ ತಡೆಗೋಡೆ ನಿರ್ಮಾಣದ ಗುಣಮಟ್ಟ ಪರಿಶೀಲಿಸಿದರು. ಪೊನ್ನತ್‍ಮೊಟ್ಟೆಯಲ್ಲಿ ಚರಂಡಿ ಕಾಮಗಾರಿ ನಡೆದಿದೆಯಾದರೂ ಸ್ಲ್ಯಾಬ್ ಅಳವಡಿಸದೆ ಇರುವುದರಿಂದ ಕಸ ಮತ್ತು ತ್ಯಾಜ್ಯಗಳು ಶೇಖರಣೆಗೊಂಡಿವೆ. ತಕ್ಷಣ ಚರಂಡಿಯನ್ನು ಸ್ವಚ್ಛಗೊಳಿಸಿ ಸ್ಲ್ಯಾಬ್ ಅಳವಡಿಸುವಂತೆ ಸ್ಥಳಕ್ಕೆ ಭೇಟಿ ನೀಡಿದ್ದ ಮಣಿ ಉತ್ತಪ್ಪ ಒತ್ತಾಯಿಸಿದರು.