ಮಡಿಕೇರಿ, ನ. 8: ಪ್ರವಾದಿ ಮುಹಮ್ಮದ್ ‘ಮಾನವತೆಯ ಮಾರ್ಗದರ್ಶಕ’ ಎಂಬ ವಿಷಯದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ವತಿಯಿಂದ ರಾಜ್ಯಾದ್ಯಂತ ನಡೆಯುತ್ತಿರುವ ಸೀರತ್ ಅಭಿಯಾನದ ಅಂಗವಾಗಿ ವಲಯ ಮಟ್ಟದಲ್ಲಿ ಪತ್ರಕರ್ತರು ಮತ್ತು ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ‘ಸಮಾಜ ಸುಧಾರಣೆಗೆ ಪ್ರವಾದಿ ಮುಹಮ್ಮದ್ ಕೊಡುಗೆ’ ಎಂಬ ಪ್ರಬಂಧ ಸ್ಪರ್ಧೆಯ ಚಾರ್ಟ್‍ನ್ನು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ ಬಿಡುಗಡೆಗೊಳಿಸಿದರು.

ಜಮಾಅತೆ ಇಸ್ಲಾಮೀ ಹಿಂದ್ ಸ್ಥಾನೀಯ ಅಧ್ಯಕ್ಷ ಜಿ.ಹೆಚ್. ಮುಹಮ್ಮದ್ ಹನೀಪ್, ಅಭಿಯಾನದ ಸಂಚಾಲಕ ಎಂ. ಅಬ್ದುಲ್ಲಾ, ಜಿಲ್ಲಾ ಸಾರ್ವಜನಿಕ ಸಂಪರ್ಕ ವಿಭಾಗದ ಸಂಚಾಲಕ ಸಿ.ಹೆಚ್. ಅಪ್ಸರ್ ಮತ್ತು ಜಿಲ್ಲಾ ಸಮಿತಿ ಸದಸ್ಯ ಎಂ.ಹೆಚ್. ಮೊಹಮ್ಮದ್ ಈ ಸಂದರ್ಭ ಉಪಸ್ಥಿತರಿದ್ದರು.