ಕಣಿವೆ, ನ. 8: ಕುಶಾಲನಗರದ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ನೌಕರನಾಗಿರುವ ವ್ಯಕ್ತಿಯೊಬ್ಬ ಚರಂಡಿ ನೀರು ಹರಿವ ಸಣ್ಣ ಜಾಗವೊಂದಕ್ಕೆ ಸಂಬಂಧಿಸಿದಂತೆ ಗ್ರಾಮವೊಂದಕ್ಕೆ ಕನ್ನಡ ಪರ ಸಂಘಟನೆಯೊಂದರ ಕಾರ್ಯಕರ್ತ ರನ್ನು ಕರೆತಂದು ಗಾಳಿಯಲ್ಲಿ ಗುಂಡು ಹಾರಿಸಿ ರೌಡಿಸಂ ಮಾಡಿಸಿರುವ ಪ್ರಕರಣ ಶನಿವಾರ ರಾತ್ರಿ ನಡೆದಿದೆ.ನೋಂದಣಾಧಿಕಾರಿ ಕಚೇರಿ ಯಲ್ಲಿರುವ ಸುನಿಲ್ ಎಂಬಾತನೇ ಮುಖ್ಯ ಆರೋಪಿ. ಬೆಂಗಳೂರು ಮೂಲದ ಎಂ.ಮಧುಗೌಡ ಸಾರಥ್ಯದ ಕರ್ನಾಟಕ ಚಳುವಳಿ ವೇದಿಕೆಯ ನಾಮಾಂಕಿತವುಳ್ಳ ನಾಲ್ಕು ವಾಹನ ಗಳಲ್ಲಿ ಒಂಭತ್ತು ಮಂದಿಯನ್ನು ಪಿರಿಯಾಪಟ್ಟಣ ತಾಲೂಕಿನ ಬಿಲ್ಲಳ್ಳಿ ಎಂಬ ಗ್ರಾಮಕ್ಕೆ ಕರೆಸಿ ದುಷ್ಕøತ್ಯ ನಡೆಸಲು ಯತ್ನಿಸಿದ್ದನು. ಶನಿವಾರ ರಾತ್ರಿ 9.30ರ ಸಮಯದಲ್ಲಿ ಗ್ರಾಮಕ್ಕೆ ನಾಲ್ಕು ಐಷಾರಾಮಿ ಕಾರುಗಳಲ್ಲಿ ಬಂದಿಳಿದ ಆಗಂತುಕರು ಗ್ರಾಮದ ಜನರಲ್ಲಿ ಭಯವನ್ನುಂಟು ಮಾಡಲು ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದರು.ಇದರಿಂದ ಆತಂಕಗೊಂಡ ಗ್ರಾಮಸ್ಥರು, ಮನೆಗಳಿಂದ ಹೊರ ಓಡಿಬಂದು ನೋಡಿದಾಗ, ಬೊಲೆರೋ, ಸ್ಕಾರ್ಫಿಯೋ ಕಾರುಗಳಲ್ಲಿ ಬಂದವರಿಂದ ನಡೆದ ಕೃತ್ಯ ಎಂದು ತಿಳಿದೊಡನೆ, ಆಗಂತುಕರು ಪರಾರಿಯಾಗದಂತೆ ಗ್ರಾಮದ ರಸ್ತೆಗಳಲ್ಲಿ ಅಡ್ಡಲಾಗಿ ಎತ್ತಿನಗಾಡಿಗಳನ್ನು ನಿಲ್ಲಿಸಿ, ಪೆÇಲೀಸರನ್ನು ಕರೆಸಿ ವಾಹನಗ ಳೊಂದಿಗೆ ಆಗಂತುಕರನ್ನು ಹಿಡಿದೊಪ್ಪಿಸಿದ್ದಾರೆ. ಈ ಸಂಬಂಧ ಒಂಭತ್ತು ಮಂದಿಯ ಮೇಲೆ ಪಿರಿಯಾಪಟ್ಟಣ

(ಮೊದಲ ಪುಟದಿಂದ) ಠಾಣೆಯಲ್ಲಿ ದೂರು ದಾಖಲಾಗಿದೆ.

ನಂಜನಗೂಡು ಮೂಲದ ಸುನಿಲ್ ಎಂಬಾತ ಬಿಲ್ಲಳ್ಳಿ ಗ್ರಾಮದ ಯುವತಿಯನ್ನು ಪ್ರೀತಿಸಿ ಕಳೆದ ಒಂದು ವರ್ಷದ ಹಿಂದೆ ವಿವಾಹ ವಾಗಿದ್ದನು. ಬಳಿಕ ಪಿರಿಯಾಪಟ್ಟಣ ದಲ್ಲಿ ಮನೆ ಮಾಡಿ ಕುಶಾಲನಗರದ ನೋಂದಣಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದನು.

ತನ್ನ ಪತ್ನಿಯ ತವರು ಮನೆ ಹಾಗೂ ಪಕ್ಕದ ಮನೆಯವರ ನಡುವೆ ಮನೆಯ ತ್ಯಾಜ್ಯ ನೀರು ಹರಿವ ಜಾಗದ ವಿಚಾರಕ್ಕೆ ಸಂಬಂಧಿಸಿದಂತೆ ವಿವಾದ ಏರ್ಪಟ್ಟಿತ್ತು.

ಪತ್ನಿಯ ಪಕ್ಕದ ಮನೆಯವರನ್ನು ಮಣಿಸಲು ಇಂತಹ ದುಷ್ಟ ಕೆಲಸಕ್ಕೆ ಕೈ ಹಾಕಿದ ಸುನಿಲ್ ಎಂಬಾತನಿಗೆ ಗ್ರಾಮದ ಜನರು ತಕ್ಕ ಶಾಸ್ತಿ ಮಾಡಿ ಪೆÇಲೀಸರಿಗೊಪ್ಪಿಸಿದ್ದಾರೆ. ಕುಶಾಲನಗರದ ನೋಂದಣಾಧಿಕಾರಿ ಗಳ ಕಚೇರಿಯಲ್ಲಿ ಲಂಚಾವತಾರದ ಮೂಲ ವ್ಯಕ್ತಿಯಾಗಿದ್ದ ಈತ ಹಣ ಮದದಿಂದ ಈ ಕೃತ್ಯಕ್ಕೆ ಮುಂದಾಗಿದ್ದು ಕೂಡಲೇ ಈತನನ್ನು ನೋಂದಣಿ ಕಚೇರಿಯಿಂದ ಹೊರದಬ್ಬಬೇಕು ಎಂದು ಬಿಲ್ಲಳ್ಳಿ ಗ್ರಾಮಸ್ಥರು ಒತ್ತಾಯಿಸಿ ದ್ದಾರಲ್ಲದೇ, ಕನ್ನಡ ಸಂಘಟನೆಯ ನಾಮಾಂಕಿತವುಳ್ಳ ವಾಹನಗಳನ್ನು ಮುಟ್ಟುಗೋಲು ಹಾಕಬೇಕು ಹಾಗೂ ಕಾರ್ಯಕರ್ತ ರನ್ನು ಜೈಲಿಗಟ್ಟಬೇಕು. ಆ ಸಂಘಟನೆಯನ್ನು ನಿಷೇಧಿಸ ಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.