ಮಡಿಕೇರಿ, ನ. 7: ಸಮಕಾಲೀನ ವಿಷಯಗಳಲ್ಲಿ ದಿಟ್ಟ ನಿಲುವು ಗಳೊಂದಿಗೆ ಧಾರ್ಮಿಕ, ಶೈಕ್ಷಣಿಕ, ಕೌಟುಂಬಿಕ ವಿಷಯಗಳನ್ನೊಳ ಗೊಂಡು ‘ಸತ್ಯದೆಡೆಗೆ ದಿಟ್ಟ ಹೆಜ್ಜೆ’ ಎಂಬ ಶೀರ್ಷಿಕೆಯಡಿಯಲ್ಲಿ ಎಸ್.ಕೆ.ಎಸ್.ಎಸ್.ಎಫ್ ಕೊಡಗು ಜಿಲ್ಲಾ ಸಮಿತಿ ಹಾಗೂ ಜಿಸಿಸಿ - ಕೊಡಗು ಸಮಿತಿಯ ಸಾರಥ್ಯದಲ್ಲಿ ಹೊರ ಬರುತ್ತಿರುವ "ಸ್ನೇಹದಾರ" ನೂತನ ಕನ್ನಡ ಮಾಸ ಪತ್ರಿಕೆಯ ಪ್ರಥಮ ಸಂಚಿಕೆ ಬಿಡುಗಡೆ ಕಾರ್ಯಕ್ರಮ ತಾ.8ರಂದು (ಇಂದು) ಬೆಳಿಗ್ಗೆ 10 ಘಂಟೆಗೆ ಕುಶಾಲನಗರದ ಕ್ಯಾಸ್ಟಲ್ ಇಂಟನ್ರ್ಯಾಷನಲ್ ಹೊಟೇಲಿನಲ್ಲಿ ನಡೆಯಲಿದೆ ಎಂದು ಎಸ್.ಕೆ.ಎಸ್.ಎಸ್.ಎಫ್. ಜಿಲ್ಲಾ ಸಮಿತಿ ಹಾಗೂ ಜಿಸಿಸಿ ಕೊಡಗು ಪ್ರಕಟಣೆಯಲ್ಲಿ ತಿಳಿಸಿದೆ. ಕೊಡಗು ಜಿಲ್ಲಾ ಉಪ ಖಾಝಿ ಶೈಖುನಾ ಅಬ್ದುಲ್ಲಾ ಫೈಝಿ ಉಸ್ತಾದ್ ಪ್ರಥಮ ಸಂಚಿಕೆಯನ್ನು ಹಾಸನ ಜಿಲ್ಲಾ ಗ್ರಾಹಕರ ವೇದಿಕೆಯ ನ್ಯಾಯಾಧೀಶ Àರಾದ ಲೋಕೇಶ್ ಕುಮಾರ್ ಅವರಿಗೆ ನೀಡುವ ಮೂಲಕ ಬಿಡುಗಡೆ ಗೊಳಿಸಲಿದ್ದಾರೆ.