ಗುಡ್ಡೆಹೊಸೂರು, ನ. 7: ಇಲ್ಲಿಗೆ ಸಮೀಪದ ರಂಗಸಮುದ್ರ ಗ್ರಾಮದ ನಿವಾಸಿ ಪರ್ಲಕೋಟಿ ಅಶೋಕ ಅವರ ಭತ್ತದ ಗದ್ದೆಗೆ ಆನೆಗಳು ದಾಳಿ ಮಾಡಿ ಕಟಾವಿನ ಹಂತದಲ್ಲಿರುವ ಭತ್ತ ಬೆಳೆಯನ್ನು ನಷ್ಟಪಡಿಸಿವೆ. ಈ ಬಗ್ಗೆ ಅವರು ಅರಣ್ಯ ಇಲಾಖೆಗೆ ದೂರು ನೀಡಿದ್ದಾರೆ. ಪ್ರತಿ ನಿತ್ಯ ಗದ್ದೆಗೆ ಆನೆಗಳು ಬರುತ್ತಿವೆ. ಹುತ್ತರಿ ಹಬ್ಬಕ್ಕೆ ಕದಿರು ತೆಗೆಯಲು ಕೂಡ ಗದ್ದೆಯಲ್ಲಿ ಬೆಳೆ ಇರಲ್ಲ ಎಂದು ತಮ್ಮ ನೋವನ್ನು ತೋಡಿಕೊಂಡಿದ್ದಾರೆ.

ಹಿಂದೆ ಬೊಳ್ಳೂರು ಗ್ರಾಮದ ನಿವಾಸಿ ಸಾಗರ್ ಎಂಬವರು ಬೆಳೆದಿದ್ದ ಸುಮಾರು ಎರಡು ಎಕರೆ ಪ್ರದೇಶದ ಸಿಹಿ ಗೆಣಸನ್ನು ಕಾಡಾನೆಗಳು ನಷ್ಟಪಡಿಸಿವೆ. ಬೆಟ್ಟಗೇರಿ ಗ್ರಾಮದಲ್ಲಿ ರಾತ್ರಿ 8 ಗಂಟೆಯಾದರೆ ಒಂಟಿ ಆನೆಯೊಂದು ನಿತ್ಯ ಪ್ರತ್ಯಕ್ಷನಾಗುತ್ತಾನೆ. ಬೆಳೆ ಬೆಳೆದ ರೈತನ ಪಾಡು ಯಾರಿಗೆ ಹೇಳೋದು ಎಂದು ಹಲವು ರೈತರು ನೋವು ತೋಡಿಕೊಂಡಿದ್ದಾರೆ.