ಕುಶಾಲನಗರ, ನ. 7: ಕುಶಾಲನಗರ ಕೊಪ್ಪ ಕಾವೇರಿ ಸೇತುವೆ ಕೆಳಭಾಗದಲ್ಲಿ ಬೃಹತ್ ಗಾತ್ರದ ಬೀಟೆ ಮರವೊಂದು ತೇಲಿಬಂದಿದ್ದು ಮರವನ್ನು ತಕ್ಷಣ ತೆರವುಗೊಳಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ಇತ್ತೀಚಿಗೆ ಸುರಿದ ಭಾರೀ ಮಳೆಗೆ ಬೇರು ಸಹಿತ ತೇಲಿಬಂದ ಸುಮಾರು 25 ಮೀ ಉದ್ದದ ಬೃಹತ್ ಗಾತ್ರದ ಮರ ಸೇತುವೆ ಕೆಳಭಾಗದಲ್ಲಿ ಕಂಡುಬಂದಿದ್ದು ಮರವನ್ನು ಸಾಗಿಸಲು ಕೆಲವು ಕಳ್ಳರು ಹೊಂಚು ಹಾಕುತ್ತಿರುವ ಬಗ್ಗೆ ‘ಶಕ್ತಿ’ಗೆ ಮಾಹಿತಿ ತಿಳಿದುಬಂದಿದೆ. ಲಕ್ಷಾಂತರ ರೂ. ಬೆಲೆಬಾಳುವ ಮರವನ್ನು ತಕ್ಷಣ ತೆರವುಗೊಳಿಸಿ ಕ್ರಮಕೈಗೊಳ್ಳುವಂತೆ ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಪತ್ರಿಕೆ ಮೂಲಕ ಕೋರಿದ್ದಾರೆ.