ಪೆÇನ್ನಂಪೇಟೆ, ನ. 7: ಉರಗ ಮತ್ತು ಪರಿಸರ ತಜ್ಞ ಸತೀಶ್ ಅವರಿಗೆ ರಾಷ್ಟ್ರಮಟ್ಟದ ವನ್ಯಜೀವಿ ಛಾಯಾಚಿತ್ರ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನದ ಪ್ರಶಸ್ತಿ ಲಭಿಸಿದೆ. ವನ್ಯಜೀವಿ ಸಪ್ತಾಹ-2020 ರ ಅಂಗವಾಗಿ ಮಂಗಳೂರಿನ ಪಿಲಿಕುಳ ಜೈವಿಕ ಉದ್ಯಾನವನದ ವತಿಯಿಂದ ಆಯೋಜಿಸಲಾಗಿದ್ದ ರಾಷ್ಟ್ರಮಟ್ಟದ ವನ್ಯಜೀವಿ ಛಾಯಾಚಿತ್ರ ಸ್ಪರ್ಧೆಯಲ್ಲಿ ಸತೀಶ್ ಅವರು ಸಾದರಪಡಿಸಿದ ಅತ್ಯುತ್ತಮ ವನ್ಯಜೀವಿ ಛಾಯಾಗ್ರಹಣಕ್ಕೆ ಈ ಪ್ರಶಸ್ತಿ ದೊರೆತಿದೆ. ಸತೀಶ್ ಅವರು ಇತ್ತೀಚಿಗೆ ಕಬಿನಿ ಅರಣ್ಯದಲ್ಲಿ ಸೆರೆಹಿಡಿಯಲಾದ ಎರಡು ಹುಲಿಗಳ ಅಪರೂಪದ ಭಂಗಿಯ ಚಿತ್ರಕ್ಕೆ ಈ ಪ್ರತಿಷ್ಠಿತ ಬಹುಮಾನ ದೊರೆತಿದೆ.

ಈ ಹಿಂದೆ ಕೊಡಗಿನಲ್ಲಿ ಉರಗ ಮತ್ತು ಪರಿಸರ ಸಂರಕ್ಷಣೆಯಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಸತೀಶ್ ಅವರಿಗೆ 2009ರಲ್ಲಿ ರಾಜ್ಯ ಸರಕಾರವು ಪ್ರತಿಷ್ಠಿತ ‘ಪರಿಸರ ಪ್ರಶಸ್ತಿ’ ನೀಡಿ ಗೌರವಿಸಿತ್ತು. ಮೂಲತಃ ಉಡುಪಿಯವರಾದ ಸತೀಶ್ ಅವರು ಮೈಸೂರಿನ ಇನ್ಫೋಸಿಸ್ ಕೇಂದ್ರದಲ್ಲಿ ಹಾಲಿ ಪ್ರಾದೇಶಿಕ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.