ನಾಪೆÉÇೀಕ್ಲು, ನ. 7: ದೇಶಕ್ಕೆ ಸ್ವಾತಂತ್ರ್ಯ ಬಂದು 74 ವರ್ಷ ಕಳೆದರೂ ನಾಪೆÇೀಕ್ಲುವಿನ ಹಳೇತಾಲೂಕಿನ ಮೇದರ ಕಾಲೋನಿಯ ಕುಟುಂಬ ಸೀಮೆಎಣ್ಣೆ ದೀಪದ ಬೆಳಕನ್ನು ಮಾತ್ರ ಕಂಡಿದ್ದು, ಕೊನೆಗೂ ವಿದ್ಯುತ್ ಬೆಳಕನ್ನು ನೋಡುವ ಸೌಭಾಗ್ಯವನ್ನು ಜನಪ್ರತಿನಿಧಿಗಳು ಕಲ್ಪಿಸಿ ಅವರನ್ನು ಬೆಳಕಿನೆಡೆಗೆ ಕೊಂಡೊಯ್ಯಲು ಜಿಲ್ಲಾ ಪಂಚಾಯಿತಿ ಸದಸ್ಯ ಮುರುಳೀಧರ್ ಕರುಂಬಮ್ಮಯ್ಯ ಶ್ರಮಿಸಿದ್ದಾರೆ. ಅದರಂತೆ ಗ್ರಾಮ ಪಂಚಾಯಿತಿ ಸಹ ಇದಕ್ಕೆ ಕೈಜೋಡಿಸಿದ್ದು ವಿದ್ಯುತ್ ಸೌಲಭ್ಯವನ್ನು ಒದಗಿಸಿಕೊಡಲು ಚೆಸ್ಕಾಂ ಅವಿರತ ಪ್ರಯತ್ನ ನಡೆಸಿದೆ. ಈ ಕಾಲೋನಿಗೆ ಸರಿಯಾದ ದಾರಿಯ ವ್ಯವಸ್ಥೆ ಇಲ್ಲ. ಗದ್ದೆಯ ಏರಿಗಾಗಿ ಕಾಲುದಾರಿಯಲ್ಲಿ ಹೋಗಬೇಕಿದ್ದು ಚೆಸ್ಕಾಂ ಇಲಾಖೆ ಕಂಬವನ್ನು ಸಾಗಿಸಲು ಹರಸಾಹಸ ಪಡುತ್ತಿದೆ.

ಮೇದರ ಜನಾಂಗ: ಕೊಡಗಿನ ಜಾನಪದದಿಂದ ಕೂಡಿದ ಮೂಲ ನಿವಾಸಿಗಳಾದ ಮೇದರ ಜನಾಂಗದವರು ಊರಿನಲ್ಲಿ ಸಾವು, ಹುತ್ತರಿ ಕೋಲಾಟ ಮತ್ತಿತರ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮೇದ ಪರೆ ಬಾರಿಸಿ ಜನರನ್ನು ರಂಜಿಸುತ್ತಾರೆ. ಕೋಲಾಟಕ್ಕೆ ಪರೆ ಇಲ್ಲದಿದ್ದರೆ ಹುತ್ತರಿ ಕೋಲಾಟ ಇಲ್ಲ. ಇಂತಹ ಜನಾಂಗವನ್ನು ಉಳಿಸಿಕೊಳ್ಳಲು ಶಿವಚಾಳಿಯಂಡ ಕುಟುಂಬದವರು ಸುಮಾರು 20 ಸೆಂಟು ಜಾಗವನ್ನು ಉದಾರವಾಗಿ ನೀಡಿದ್ದು, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿಯವರು ದಾರಿಯ ವ್ಯವಸ್ಥೆಯನ್ನು ಕಲ್ಪಿಸಿಕೊಡಬೇಕಿದೆ ಎಂದು ಅಲ್ಲಿನ ನಿವಾಸಿಗಳು ಒತ್ತಾಯಿಸಿದ್ದಾರೆ. - ದುಗ್ಗಳ ಸದಾನಂದ.