ವೀರಾಜಪೇಟೆ ವರದಿ, ನ. 7: ಸಂಸ್ಕøತಿ ಹಾಗೂ ಕಲೆಗಳು ಒಂದನ್ನೊಂದು ಬೆಸೆದು ಕೊಂಡಿವೆ. ಯುವ ಪೀಳಿಗೆ ಹಿರಿಯರಿಂದ ಕಲಾ ಭಾಷೆಯನ್ನು ಅರಿತರೆ ಸಂಸ್ಕøತಿ ಉಳಿಯುತ್ತದೆ ಎಂದು ವೀರಾಜಪೇಟೆಯ ಉದ್ಯಮಿ ಬಿ.ವಿ. ಹೇಮಂತ್ ನುಡಿದರು. ನಗರದ ‘ಎವರ್ ಗ್ರೀನ್ ಕೂರ್ಗ್’ ಕಲಾ ಮಂದಿರದ 15 ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಏರ್ಪಡಿಸಿದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಲಾ ಮಂದಿರದ ಸ್ಥಾಪಕ ಚೇತನ್ ಶಿವಪ್ಪ ಮಾತನಾಡಿ, ಈ ಕಲಾ ಮಂದಿರ 15 ವರ್ಷ ಪೂರೈಸಿದ ಬಗ್ಗೆ ವಿವರಿಸಿದರು. ವೇದಿಕೆಯಲ್ಲಿ ಜೇಸನ್, ಸುದೀಶ್ ಕುಮಾರ್ ಮತ್ತು ಮೇಲ್ವಿಚಾರಕ ಗೌತಮ್ ಹಾಗೂ ಇತರರು ಹಾಜರಿದ್ದರು.