ಮಡಿಕೇರಿ, ನ. 8: ಕೊಡಗು ಮೂಲದ ವಿದ್ಯುತ್ ಇಂಜಿನಿಯರ್ ಕರ್ನಾಟಕ ಸರ್ಕಾರದ ಉನ್ನತ ಹುದ್ದೆಗೆ ಪದೋನ್ನತಿ ಪಡೆದು ಜಿಲ್ಲೆಯ ಹೆಮ್ಮೆಗೆ ಮತ್ತೊಂದು ಗರಿ ಮೂಡಿಸಿದ್ದಾರೆ. ಹುದಿಕೇರಿ ಮೂಲದ ತೀತಿರ ನಂಜಪ್ಪ ಮತ್ತು ಶಾಂತಿ ದಂಪತಿಗಳ ಪುತ್ರ ತೀತಿರ ಅಪ್ಪಚ್ಚು ಅವರನ್ನು ಶನಿವಾರ ರಾಜ್ಯ ಸರ್ಕಾರ ಇಂಧನ ಸಚಿವಾಲಯದ ಅಧೀನದಲ್ಲಿ ಬರುವ ವಿದ್ಯುತ್ ಪರಿವೀಕ್ಷಣಾ ಇಲಾಖೆಯ ಮುಖ್ಯ ವಿದ್ಯುತ್ ಪರಿವೀಕ್ಷಕರನ್ನಾಗಿ ನೇಮಿಸಿ ಆದೇಶ ಹೊರಡಿಸಿದೆ. ಅಪ್ಪಚ್ಚು ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಹುದಿಕೇರಿ ಸರ್ಕಾರಿ ಶಾಲೆ, ಪ್ರೌಢ ಶಿಕ್ಷಣವನ್ನು ಮೈಸೂರಿನ ರಾಮಕೃಷ್ಣ ಆಶ್ರಮ ಮತ್ತು ವಿದ್ಯುತ್ ಇಂಜಿನಿಯರ್ ಪದವಿ ಯನ್ನು ಚಿಕ್ಕಮಗಳೂರಿನ ಆದಿ ಚುಂಚನಗಿರಿ ಇನ್ಸ್‍ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಪಡೆದು ಒಂದು ವರ್ಷ ಗೋಣಿಕೊಪ್ಪ ಕಾವೇರಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರು.1994ರಲ್ಲಿ ಕೆಪಿಎಸ್‍ಸಿ ಪರೀಕ್ಷೆಯಲ್ಲಿ ಆಯ್ಕೆಯಾಗುವ ಮೂಲಕ ಅಸಿಸ್ಟೆಂಟ್ ಎಲೆಕ್ಟ್ರಿಕಲ್ ಇನ್ಸ್‍ಪೆಕ್ಟರ್ ಆಗಿ ಸರ್ಕಾರಿ ಸೇವೆಗೆ ಸೇರ್ಪಡೆ ಗೊಂಡರು. ನಂತರ ಡೆಪ್ಯುಟಿ ಎಲೆಕ್ಟ್ರಿಕಲ್ ಇನ್ಸ್‍ಪೆಕ್ಟರ್, ಎಲೆಕ್ಟ್ರಿಕಲ್ ಇನ್ಸ್‍ಪೆಕ್ಟರ್ ಆಗಿ 2018ರಲ್ಲಿ ಡೆಪ್ಯುಟಿ ಚೀಫ್ ಎಲೆಕ್ಟ್ರಿಕಲ್

(ಮೊದಲ ಪುಟದಿಂದ) ಇನ್ಸ್‍ಪೆಕ್ಟರ್ ಆಗಿ ಬಡ್ತಿ ಪಡೆದರು. ಮಾರನೇ ವರ್ಷವೇ ಅಡಿಷನಲ್ ಚೀಫ್ ಎಲೆಕ್ಟ್ರಿಕಲ್ ಇನ್ಸ್‍ಪೆಕ್ಟರ್ ಕರ್ತವ್ಯ ನಿರ್ವಹಿಸುತ್ತಿದ್ದು, ಇದೀಗ ಚೀಫ್ ಎಲೆಕ್ಟ್ರಿಕಲ್ ಇನ್ಸ್‍ಪೆಕ್ಟರ್ ಆಗಿ ನೇಮಕಗೊಂಡಿದ್ದಾರೆ. ವಿದ್ಯುತ್ ಪರಿವೀಕ್ಷಣಾ ಇಲಾಖೆಯಲ್ಲಿ ಇದು ರಾಜ್ಯಕ್ಕೆ ಒಂದೇ ಹುದ್ದೆ ಆಗಿದ್ದು ಇಲಾಖೆಯ ಮುಖ್ಯಸ್ಥರೂ ಇವರೇ ಆಗಿದ್ದಾರೆ.