*ಗೋಣಿಕೊಪ್ಪಲು, ನ. 6: ಪೌತಿ ಖಾತೆ ಆಂದೋಲನಕ್ಕೆ ನವೆಂಬರ್ 9ರಿಂದ ಚಾಲನೆ ನೀಡಲಾಗುವುದು. ತಾಲೂಕಿನ ಪ್ರತಿ ಗ್ರಾ.ಪಂ. ವ್ಯಾಪ್ತಿಯಲ್ಲಿ ನವೆಂಬರ್ 9ರಿಂದ 23ರವರೆಗೆ 15 ದಿನಗಳ ಕಾಲ ಈ ಸೇವೆ ಲಭ್ಯವಿದೆ ಎಂದು ತಾಲೂಕು ದಂಡಾಧಿಕಾರಿ ನಂದೀಶ್ ಮಾಹಿತಿ ನೀಡಿದ್ದಾರೆ.
ಪೆÇನ್ನಂಪೇಟೆ ಸಾಮಥ್ರ್ಯ ಸೌಧ ಸಭಾಂಗಣದಲ್ಲಿ ವೀರಾಜಪೇಟೆ ತಾಲೂಕು ಪಂಚಾಯಿತಿ ಅಧ್ಯಕ್ಷೆ ಬೊಳ್ಳಚಂಡ ಸ್ಮಿತಾ ಪ್ರಕಾಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಈ ವಿಚಾರ ತಿಳಿಸಿದರು. ಪೌತಿ ಖಾತೆ ಆಂದೋಲನದಿಂದ ರೈತರಿಗೆ ಪ್ರ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಸಿಗುವ ಸೌಲಭ್ಯಗಳು ಯಾವುದೇ ತೊಡಕಿಲ್ಲದೆ ಸಿಗಲಿದೆ. ಇದು ರೈತರಿಗೆ ಬಹು ಉಪಯೋಗವಾಗಿದೆ.
ಪ್ರತಿ ಮನೆ ಮನೆಗಳಿಗೆ ತೆರಳಿ ದಾಖಲಾತಿ ಪರಿಶೀಲಿಸಲಾಗುವುದು. ಮನೆಗೆ ಬಂದು ಪರಿಶೀಲನೆ ನಡೆಸುವ ತಂಡಗಳಿಗೆ ಮರಣ ಪತ್ರ ನೀಡಿದರೆ ಸಾಕು. ಹಾಗೆಯೇ ಆರ್.ಟಿ.ಸಿ.ಯಲ್ಲಿ ತಿದ್ದುಪಡಿಯಿದ್ದರೂ ಈ ಸಂದರ್ಭದಲ್ಲಿ ಸರಿಪಡಿಸಿಕೊಡಲಾಗುವುದು ಎಂದು ಸಭೆಗೆ ಮಾಹಿತಿ ಒದಗಿಸಿದರು.
ಪ್ರಸ್ತುತ ವರ್ಷದಲ್ಲಿ ಶೈಕ್ಷಣಿಕ ವರ್ಷ ಪ್ರಾರಂಭಿಸುವುದು ಬೇಡ. ಕೊರೊನಾ ಆತಂಕದಿಂದ ಕಾಡುತ್ತಿರುವುದರಿಂದ ಮಕ್ಕಳಿಗೆ ಹೆಚ್ಚಿನ ಸಮಸ್ಯೆಯಾಗಲಿದೆ. ಹೀಗಾಗಿ ನೇರ ಪರೀಕ್ಷೆಗೆ ಹಾಜರಾಗುವಂತೆ ವ್ಯವಸ್ಥೆ ರೂಪಿಸುವುದು ಒಳಿತು ಎಂದು ತಾ.ಪಂ. ಸದಸ್ಯ ಕುಟ್ಟಂಡ ಅಜಿತ್ ಕರುಂಬಯ್ಯ ಒತ್ತಾಯಿಸಿ ಈ ಬಗ್ಗೆ ಸರ್ಕಾರ ಗಮನ ಸೆಳೆಯಲು ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಹೇಳಿದರು. ಖಾಸಗಿ ಶಾಲೆಗಳು ಪೂರ್ಣವಾಗಿ ವಿದ್ಯಾಶುಲ್ಕ ಪಾವತಿಸುವಂತೆ ಒತ್ತಡ ಹೇರುತ್ತಿದ್ದಾರೆ. ಇಂತಹ ಸಂಸ್ಥೆಗಳ ಬಗ್ಗೆ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲಾ ಬೀಳಗಿಯವರಿಗೆ ಸೂಚಿಸಿದರು.
ಮಕ್ಕಳ ವಿದ್ಯಾಶುಲ್ಕ ಎಂದು ಹಣ ಪಡೆದುಕೊಳ್ಳುತ್ತಿರುವ ಸಂಸ್ಥೆಗಳು ಅಲ್ಲಿನ ಶಿಕ್ಷಕರಿಗೆ ಮಾತ್ರ ಶೇ. 50ರಷ್ಟು ಮಾತ್ರ ವೇತನ ನೀಡುತ್ತಿದೆ. ಇಂತಹ ವ್ಯವಸ್ಥೆಯ ಬಗ್ಗೆ ಪ್ರಶ್ನಿಸಿ ಸೂಕ್ತ ಕ್ರಮಕೈಗೊಳ್ಳಬೇಕೆಂದು ಸಭೆಯಲ್ಲಿ ಚರ್ಚಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಶಿಕ್ಷಣಾಧಿಕಾರಿಗಳು ಪೆÇೀಷಕರ ದೂರು ಬಂದಲ್ಲಿ ಕ್ರಮ ಕೈಗೊಳ್ಳಲು ಮುಂದಾಗುತ್ತೇವೆ. ಸರಕಾರ ಸುತ್ತೋಲೆಯಂತೆ ಖಾಸಗಿ ಶಾಲೆ ಮೊದಲ ಹಂತದ ಶುಲ್ಕ ತೆಗೆದುಕೊಳ್ಳಲು ಅನುಮತಿ ಇದೆ. ಆದರೆ ಒತ್ತಾಯಪೂರ್ವಕವಾಗಿ ಪಡೆದುಕೊಳ್ಳುವ ಅವಕಾಶವಿಲ್ಲ ಎಂದು ಮಾಹಿತಿ ನೀಡಿದರು.
ಗೋಣಿಕೊಪ್ಪಲು ಚೆಸ್ಕಾಂ ಇಲಾಖೆಯಿಂದ ಬಲವಂತವಾಗಿ ರೈತರಿಗೆ ಮಾಹಿತಿ ನೀಡದೇ ವಿದ್ಯುತ್ ಶುಲ್ಕ ವಸೂಲಾತಿ ಮಾಡಲಾಗುತ್ತಿದೆ. ಹಣ ಪಾವತಿಸದೇ ಇದ್ದವರ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತಿದ್ದಾರೆ. ಅಲ್ಲದೇ, ಮುಂಚಿತವಾಗಿ ಚೆಕ್ ಪಡೆದುಕೊಳ್ಳುವ ವ್ಯವಸ್ಥೆಯನ್ನು ಜಾರಿಗೆ ತಂದು ರೈತರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ತಾ.ಪಂ. ಉಪಾಧ್ಯಕ್ಷ ನೆಲ್ಲೀರ ಚಲನ್ ಸಭೆಯಲ್ಲಿ ಪ್ರಸ್ತಾಪಿಸಿದರು.
ಕೊರೊನಾ ಸಂಕಷ್ಟದಿಂದ ಚೇತರಿಸಿಕೊಳ್ಳಲು ಸಾಧ್ಯವಾಗದೇ ಆರ್ಥಿಕ ಮಟ್ಟ ಕುಸಿದಿರುವ ಇಂತಹ ಸಂದರ್ಭದಲ್ಲಿ ರೈತರಿಗೆ ಒತ್ತಡ ಹೇರಿ ಈ ರೀತಿ ನಡೆದುಕೊಳ್ಳುತ್ತಿರುವುದರ ವಿರುದ್ಧ ಸರ್ವ ಸದಸ್ಯರು ಆಕ್ರೋಶ ವ್ಯಕ್ತಪಡಿಸಿ ಇಂತಹ ಘಟನೆ ನಡೆಯದಂತೆ ಮತ್ತು ಹಣ ವಸೂಲಾತಿ ಮಾಡದಂತೆ ಹಾಗೂ ಮಾರ್ಚ್ ತಿಂಗಳವರೆಗೆ ರೈತರಿಗೆ ಕಾಲಾವಕಾಶ ನೀಡಬೇಕೆಂದು ವೀರಾಜಪೇಟೆ ಹಿರಿಯ ಸಹಾಯಕ ಇಂಜಿನಿಯರ್ ಅಶೋಕ್ ಅವರಿಗೆ ಸಭೆ ಸೂಚಿಸಿತು.
ಕೋವಿಡ್‍ನಿಂದಾಗಿ ಮದ್ಯದ ವ್ಯಾಪಾರ ಕ್ಷೀಣಿಸಿದೆ. ಸರ್ಕಾರ ಸೂಚಿಸಿರುವ ಗುರಿಯನ್ನು ತಲುಪಲು ಸಾಧ್ಯವಾಗುತ್ತಿಲ್ಲ ಎಂದು ಅಬಕಾರಿ ಇನ್ಸ್‍ಪೆಕ್ಟರ್ ಸೋಮಣ್ಣ ತಿಳಿಸಿದರು. ತಾಲೂಕಿನಾದ್ಯಂತ ಬಹುತೇಕ ಮನೆಗಳಲ್ಲಿ ಹಾಗೂ ನ್ಯಾಯಬೆಲೆ ಅಂಗಡಿ, ದಿನಸಿ ಅಂಗಡಿಗಳಲ್ಲಿ ಮದ್ಯ ಮಾರಾಟ ನಡೆಯುತ್ತಿದೆ. ಆದರೂ ಈ ಬಗ್ಗೆ ಇಲಾಖೆ ಕ್ರಮ ಕೈಗೊಳ್ಳುತ್ತಿಲ್ಲ. ಕೆಲವೆಡೆ ಬರಿಸ್ ಮಾರಾಟ ನಡೆಯುತ್ತಿದೆ. ಈ ಬಗ್ಗೆ ಕ್ರಮಕೈಗೊಳ್ಳಬೇಕೆಂದು ಸದಸ್ಯೆ ಕಾವೇರಮ್ಮ ಆಗ್ರಹಿಸಿದರು. ಇದಕ್ಕೆ ಬೆಂಬಲವಾಗಿ ಸಭೆಯಲ್ಲಿದ್ದ ಮಹಿಳಾ ಸದಸ್ಯರುಗಳೆಲ್ಲಾ ಧ್ವ್ವನಿಗೂಡಿಸಿ ಅಕ್ರಮ ಮಧ್ಯ ಮಾರಾಟದ ಬಗ್ಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಇದಕ್ಕೆ ಪ್ರತ್ಯುತ್ತರವಾಗಿ ಒಂದು ಮನೆಯಲ್ಲಿ 2.3 ಲೀಟರ್ ಮದ್ಯ ಇಟ್ಟುಕೊಳ್ಳುವ ಅವಕಾಶವಿದೆ. ಹೀಗಾಗಿ ಕಾನೂನು ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಸಾಕ್ಷಿಗಳು ಲಭ್ಯವಿಲ್ಲದೇ ಇರುವುದರಿಂದ ಕಾನೂನು ರೀತಿಯಲ್ಲಿ ಸಾಗಲು ತೊಡಕಾಗುತ್ತಿದೆ ಎಂದು ಸಭೆಗೆ ಅಬಕಾರಿ ಅಧಿಕಾರಿ ಸೋಮಣ್ಣ ತಿಳಿಸಿದರು.
ಗೋಣಿಕೊಪ್ಪಲು ಪಂಚಾಯಿತಿ ಯ ಕಟ್ಟಡವನ್ನು ಖಾಸಗಿ ವ್ಯಕ್ತಿಯೊಬ್ಬರು ಕೋರ್ಟ್‍ನಲ್ಲಿ ವ್ಯಾಜ್ಯವಿದ್ದರೂ ಒಡೆದು ಹಾಕುವ ಮೂಲಕ ಕಾನೂನನ್ನು ಕೈಗೆತ್ತಿ ಕೊಂಡಿದ್ದಾರೆ. ಈತನ ಬಗ್ಗೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಪಂಚಾಯಿತಿ ಮುಂದಾಗಬೇಕೆಂದು ಸಭೆಯಲ್ಲಿ ಸದಸ್ಯ ಕುಟ್ಟಂಡ ಅಜಿತ್ ಕರುಂಬಯ್ಯ ಅವರ ಒತ್ತಾಯಕ್ಕೆ ಮಣಿದು ಸರ್ವ ಸದಸ್ಯರು ಕ್ರಮ ಕೈಗೊಳ್ಳಲು ನಿರ್ಣಯಿಸಿದರು.
ಆರೋಗ್ಯ ಇಲಾಖೆಯ ಪ್ರಗತಿಯನ್ನು ತಾಲೂಕು ವೈದ್ಯಾಧಿಕಾರಿ ಯತಿರಾಜ್ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಗುರುಶಾಂತಪ್ಪ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಸೀತಾಲಕ್ಷ್ಮಿ, ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಸುಬ್ಬಯ್ಯ, ಜಿಲ್ಲಾ ಪಂಚಾಯಿತಿ ಇಂಜಿನಿಯರ್ ಮಹಾದೇವ್, ಕೃಷಿ ಇಲಾಖೆ ಸಹಾಯಕ ಅಧಿಕಾರಿ ರೀನಾ, ಪಶುಸಂಗೋಪನಾ ಇಲಾಖೆಯ ಅಧಿಕಾರಿ ತಿಮ್ಮಯ್ಯ, ತೋಟಗಾರಿಕೆ ಇಲಾಖೆಯ ದೀನ, ಪೆÇನ್ನಂಪೇಟೆ ಆರ್.ಎಫ್.ಓ ರಾಜಪ್ಪ ಸೇರಿದಂತೆ ಹಲವು ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.
ಸಭೆಯಲ್ಲಿ ತಾ.ಪಂ ಉಪಾಧ್ಯಕ್ಷ ನೆಲ್ಲೀರ ಚಲನ್‍ಕುಮಾರ್, ಕಾರ್ಯನಿರ್ವಹಣಾಧಿಕಾರಿ ಕೊಣಿಯಂಡ ಅಪ್ಪಣ್ಣ, ತಾ.ಪಂ. ಸದಸ್ಯರುಗಳು ಹಾಗೂ ಇಲಾಖೆ ಅಧಿಕಾರಿಗಳು ಹಾಜರಿದ್ದರು.
-ಎನ್.ಎನ್. ದಿನೇಶ್