ಮಡಿಕೇರಿ, ನ. 6: ನಗರದ ಬಿಪಿನ್ ಬೇಕಲ್ ಹಾಗೂ ಸೌಮ್ಯ ಹೆಚ್. ಅವರ ಪುತ್ರ ಆಕರ್ಷ್ ಬೇಕಲ್ ಕಿರುಚಿತ್ರ ಸ್ಪರ್ಧೆಯಲ್ಲಿ ರಾಷ್ಟ್ರಕ್ಕೆ 2ನೇ ಸ್ಥಾನ ಪಡೆದಿದ್ದಾನೆ. ಭಾರತ ಸರಕಾರದ ‘ನ್ಯೂ ಆ್ಯಂಡ್ ರಿನೀವೇಬಲ್ ಎನರ್ಜಿ’ (ಹೊಸ ಹಾಗೂ ಪುನರ್‍ನವೀಕರಿಸ ಬಹುದಾದ ಶಕ್ತಿ) ಸಚಿವಾಲಯ ಏರ್ಪಡಿಸಿದ್ದ ಕಿರುಚಿತ್ರ ಸ್ಪರ್ಧೆಯಲ್ಲಿ ರಾಷ್ಟ್ರಕ್ಕೆ 2ನೇ ಸ್ಥಾನ ಪಡೆಯುವುದರ ಮೂಲಕ ರೂ. 1.5 ಲಕ್ಷ ನಗದು ಬಹುಮಾನವನ್ನು ತಮ್ಮದಾಗಿಸಿಕೊಂಡಿದ್ದಾರೆ. ‘ಪುನರ್‍ನವೀಕರಿಸಬಹುದಾದ ಶಕ್ತಿ’ ವಿಷಯದ ಕುರಿತು ಕಿರುಚಿತ್ರ ಸ್ವರ್ಧೆ ಏರ್ಪಡಿಸಲಾಗಿತ್ತು. ಆಕರ್ಷ್ ಬೆಂಗಳೂರಿನ ಸಿದ್ದಗಂಗಾ ಪಬ್ಲಿಕ್ ಶಾಲೆಯ 10ನೇ ತರಗತಿಯ ವಿದ್ಯಾರ್ಥಿ.