ಚುನಾವಣೆ ರದ್ದು

ಮಡಿಕೇರಿ, ನ. 6: ನಂ. 292ನೇ ಅಮ್ಮತ್ತಿನಾಡು ವ್ಯವಸಾಯೋತ್ಪನ್ನ ಮಾರಾಟ ಮತ್ತು ಪರಿವರ್ತನಾ ಸಹಕಾರ ಸಂಘ ನಿ; ಅಮ್ಮತ್ತಿ, ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯ ಒಟ್ಟು 10 ಸ್ಥಾನಗಳಿಗೆ ಸಂಬಂಧಿಸಿದಂತೆ ನಾಮಪತ್ರ ವಾಪಸಾತಿ ನಂತರ ಎಲ್ಲಾ 10 ಅಭ್ಯರ್ಥಿಗಳು ಮುಂದಿನ 2020-2025ರ ಐದು ವರ್ಷದ ಅವಧಿಗೆ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

‘ಎ’ ತರಗತಿ ಸಹಕಾರ ಸಂಘಗಳ ಪರವಾಗಿ - ಐನಂಡ ಎ. ಅಯ್ಯಣ್ಣ, ‘ಬಿ’ ತರಗತಿ ಸಾಮಾನ್ಯ ಸ್ಥಾನಕ್ಕೆ - ಮೊಳ್ಳೇರೆ ಪಿ. ಪೂಣಚ್ಚ, ಮೂಕೊಂಡ ಎ. ದೇವಯ್ಯ, ನೆಲ್ಲಮಕ್ಕಡ ಬಿ. ದೇವಯ್ಯ, ಮಾಚಿಮಂಡ ಎಂ. ಮಾದಪ್ಪ, ಮಹಿಳಾ ಮೀಸಲು ಸ್ಥಾನಕ್ಕೆ -ಉದ್ದಪಂಡ ಎ. ಕುಶಿ, ಕೇಚಂಡ ಎ. ಪೊನ್ನಮ್ಮ, ಪರಿಶಿಷ್ಟ ಜಾತಿ ಮೀಸಲು ಸ್ಥಾನಕ್ಕೆ - ಹೆಚ್.ಕೆ. ನರಸಯ್ಯ, ಹಿಂದುಳಿದ ಪ್ರವರ್ಗ ‘ಎ’ ಮೀಸಲು ಸ್ಥಾನಕ್ಕೆ- ಬಿ.ಎಸ್. ಚಂದ್ರ, ಪಿ.ಎಸ್. ಬೋಪಯ್ಯ ಅವರುಗಳು ಆಯ್ಕೆಯಾಗಿದ್ದಾರೆ. ಆದುದರಿಂದ ತಾ. 11 ರಂದು ನಡೆಯಬೇಕಾಗಿದ್ದ ಚುನಾವಣೆ ರದ್ದಾಗಿರುವುದಾಗಿ ಕಾರ್ಯದರ್ಶಿ ತಿಳಿಸಿದ್ದಾರೆ.