ಮಡಿಕೇರಿ, ನ. 6 ಇತ್ತೀಚೆಗೆ ಮಡಿಕೇರಿ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿನ ಸಮನ್ವಯ ಶಿಕ್ಷಣಕ್ಕೆ ಒಳಪಡುವ ಗೃಹಾಧಾರಿತ ವಿದ್ಯಾರ್ಥಿಗಳಾದ, ಚೆಟ್ಟಳ್ಳಿ ಪ್ರೌಢಶಾಲಾ ವಿದ್ಯಾರ್ಥಿ ಸುಹೇಬ್‍ಖಾನ್, ನಗರಸಭೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಿಲ್‍ರೋಡ್ ಮಡಿಕೇರಿ ವಿದ್ಯಾರ್ಥಿ ಮಹಮ್ಮದ್ ರಬ್ಜಾನ್, ಸರಕಾರಿ ಹಿರಿಯ ಪ್ರಾಥಮಿಕ ನೀರುಕೊಲ್ಲಿ ಶಾಲಾ ವಿದ್ಯಾರ್ಥಿನಿ ಗಾನವಿ, ಸರಕಾರಿ ಮಾದರಿ ಪ್ರಾಥಮಿಕ ಕಡಗದಾಳು ಶಾಲಾ ವಿದ್ಯಾರ್ಥಿನಿ ಜೀವಿತ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಕೋರಂಗಾಲ ಶಾಲಾ ವಿದ್ಯಾರ್ಥಿ ದೇವಿಪ್ರಸಾದ್ ವಿದ್ಯಾರ್ಥಿಗಳಿಗೆ ಇನ್ನರ್‍ವ್ಹೀಲ್ ಸಂಸ್ಥೆಯಿಂದ “ದಿನ ಬಳಕೆ ವಸ್ತುಗಳ ಕಿಟ್”ನ್ನು ವಿತರಿಸಿದರು.