ಮಡಿಕೇರಿ, ನ. 6: ಪ್ರಸಕ್ತ ಸಾಲಿನ ಶೈಕ್ಷಣಿಕ ಸಾಲಿಗೆ ಪ್ರಥಮ ಮತ್ತು ದ್ವಿತೀಯ ಪಿಯುಸಿ ತರಗತಿಗಳಿಗೆ ವಿದ್ಯಾರ್ಥಿಗಳು ದಾಖಲಾತಿ ಹೊಂದಲು ದಿನಾಂಕ ನಿಗದಿಪಡಿಸಲಾಗಿದೆ.
ಪ್ರಥಮ ಪಿಯುಸಿ ತರಗತಿಗೆ ದಾಖಲಾಗಲು ತಾ. 27 ಕೊನೆಯ ದಿನ. ದ್ವಿತೀಯ ಪಿಯುಸಿ ತರಗತಿಗೆ ದಾಖಲಾಗಲು ತಾ. 13 ಕೊನೆಯ ದಿನ. 2021 ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ಹಾಜರಾಗಲು ಖಾಸಗಿ ಅಭ್ಯರ್ಥಿಯಾಗಿ ನೋಂದಾಯಿಸಿಕೊಳ್ಳಲು ತಾ. 12 ಕೊನೆಯ ದಿನ (ದಂಡ ಶುಲ್ಕವಿಲ್ಲದೆ), ದಂಡ ಶುಲ್ಕಗಳೊಂದಿಗೆ ದಾಖಲಾಗಲು ತಾ. 26 ಕೊನೆಯ ದಿನವಾಗಿದೆ.
ಖಾಸಗಿ ಅಭ್ಯರ್ಥಿಯ ನೋಂದಣಿ ಸಂಬಂಧ ಹೆಚ್ಚಿನ ಮಾಹಿತಿಗೆ ಸನಿಹದಲ್ಲಿ ಬರುವ ಸರ್ಕಾರಿ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರನ್ನು ಸಂಪರ್ಕಿಸಬಹುದು ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸಿ.ಎಂ. ಮಹಾಲಿಂಗಯ್ಯ ತಿಳಿಸಿದ್ದಾರೆ.