ಮಡಿಕೇರಿ, ನ. 6: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯಿಂದ ಇತ್ತೀಚೆಗೆ ಫೆಲೋಶಿಪ್/ ದಾಖಲೀಕರಣ ಮಾಡಲು ಅರ್ಹವಾದ ಅಭ್ಯರ್ಥಿಗಳ ಆಯ್ಕೆ ಮಾಡಿರುವ ಸಮಿತಿಯ ಎರಡನೆಯ ಸಭೆಯು ಅಕಾಡೆಮಿಯ ಕಚೇರಿಯಲ್ಲಿ ಡಾ. ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಈ ಸಭೆಗೆ ಕೊಡವ ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಗೌರಮ್ಮ ಮಾದಮ್ಮಯ್ಯ, ಮಾಚಿಮಾಡ ಜಾನಕಿ ಮಾಚಯ್ಯ, ಬಬ್ಬಿರ ಸರಸ್ವತಿ, ಪಡಿಞರಂಡ ಪ್ರಭುಕುಮಾರ್, ಡಾ.ಮಲ್ಲೇಂಗಡ ರೇವತಿ ಪೂವಯ್ಯ, ತೇಲಪಂಡ ಕವನ್ ಕಾರ್ಯಪ್ಪ ಹಾಗೂ ರಿಜಿಸ್ಟ್ರಾರ್ ಅಜ್ಜಿಕುಟ್ಟಿರ.ಸಿ.ಗಿರೀಶ್ ಇವರುಗಳು ಈ ಸಮಿತಿ ಸಭೆಯಲ್ಲಿ ಹಾಜರಿದ್ದರು.

ಈ ಅಭ್ಯರ್ಥಿಗಳು ಸೂಚಿಸಿದ ವಿಷಯದಲ್ಲಿ ಸಂಶೋಧನೆ ದಾಖಲೀಕರಣ ಮಾಡಲು ಆಯ್ಕೆಯಾಗಿದ್ದಾರೆ. ಆಯ್ಕೆಯಾದವರ ಹೆಸರು ಮತ್ತು ವಿಷಯದ ವಿವರ ಇಂತಿದೆ: ಫೆಲೋಶಿಪ್ ಅಭ್ಯರ್ಥಿಗಳ ಹೆಸರು ಮತ್ತು ವಿಷಯ ಪೊನ್ನಣ್ಣ.ಸಿ.ಪಿ (iಟಿಛಿಟusioಟಿ oಜಿ ಞoಜಚಿvಚಿ ಟಚಿಟಿguಚಿge iಟಿ ಣhe 8ಣh sಛಿheಜuಟe oಜಿ iಟಿಜiಚಿಟಿ ಛಿoಟಿsಣiಣuಣioಟಿ), ಕಂಬೆಯಂಡ ಡೀನಾ ಬೋಜಣ್ಣ (ಞoಜಚಿvಚಿ ಡಿiಣuಚಿಟs ಚಿಟಿಜ ಣಡಿಚಿಜiಣioಟಿs : ಂ ಛಿಡಿiಣiಛಿಚಿಟ evಚಿಟuಚಿಣioಟಿ), ಡಾ. ಅವಿನಾಶ್. ವಿ (ಕೊಡಗಿನಲ್ಲಿ ಸಂವಿಧಾನಿಕ ಸುಧಾರಣೆಗಳು ಮತ್ತು ರಾಜಕೀಯ ಪರಿವರ್ತನೆಗಳು), ಐತಿಚಂಡ ರಮೇಶ್ ಉತ್ತಪ್ಪ (ಕೊಡವ ಸಂಸ್ಕøತಿ ಮತ್ತು ಮಹಿಳೆ), ಬಾಚರಣಿಯಂಡ ರಾಣು ಅಪ್ಪಣ್ಣ (ಕೊಡವ ಸಂಸ್ಕøತಿ ಅಂದು-ಇಂದು), ಈಶ್ವರಿ. ಬಿ.ಪಿ (iಜeಟಿಣiಣಥಿ oಜಿ ಞoಜಚಿgu ತಿiಣh sಠಿeಛಿiಚಿಟ ಡಿeಜಿeಡಿeಟಿಛಿe ಣo hoಛಿಞeಥಿ ಚಿಟಿಜ miಟiಣಚಿಡಿಥಿ ಣಡಿಚಿಜiಣioಟಿ), ಪುತ್ತಮನೆ ವಿದ್ಯಾ ಜಗದೀಶ್ (ಕೊಡಗಿನ ದೇವರಕಾಡಿನ ವಿಶ್ಲೇಷಣೆ), ಕಲ್ಪನ ಬಿ.ಎಂ. (ಕೊಡವ ಪಾರಂಪರಿಕ ಆಭರಣಗಳು ಹಾಗೂ ಶಸ್ತ್ರಾಸ್ರಗಳ ಹಿನ್ನೆಲೆ), ಬೊಡುಕುಟ್ಟಡ ಡಾ.ರಾಧಿಕ ಕುಟ್ಟಪ್ಪ (ಅನನ್ಯತೆಯ ನೆಲೆಯಲ್ಲಿ ಪನ್ನಂಗಾಲತಮ್ಮೆ), ಹಾಗೆಯೇ ದಾಖಲೀಕರಣಕ್ಕೆ ಆಯ್ಕೆಯಾದವರಲ್ಲಿ ಮೊಳ್ಳೆಕುಟ್ಟಂಡ ದಿನು ಬೋಜಪ್ಪ (ಕೊಡವ ಭಾಷಿಕರ ಐನ್‍ಮನೆ ಮತ್ತು ಕೈಮಡ), ಕೂಡಂಡ ಸಾಬಾ ಸುಬ್ರಮಣಿ (ಕೊಡವ ಭಾಷಿಕ ಜನಾಂಗಕಾರಡ ಸಾಂಸ್ಕøತಿಕ ಅಧ್ಯಯನ) ಗಳಾಗಿವೆ ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು ತಿಳಿಸಿದ್ದಾರೆ.