ಮಡಿಕೇರಿ, ನ. 4: ಜಿಲ್ಲೆಯಲ್ಲಿ ತಾ. 4 ರಂದು ಹೊಸದಾಗಿ 9 ಕೊರೊನಾ ಪ್ರಕರಣಗಳು ವರದಿಯಾಗಿವೆ. ಜಿಲ್ಲೆಯಲ್ಲಿ ಇದುವರೆಗೆ 72,297 ಮಂದಿಯ ಗಂಟಲು ದ್ರವ ಮಾದರಿ ಪರೀಕ್ಷಿಸಿದ್ದು, 4,950 ಮಂದಿಗೆ ಸೋಂಕು ತಗುಲಿದೆ. ಈ ಪೈಕಿ 4,767 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 69 ಮಂದಿ ಸಾವನ್ನಪ್ಪಿದ್ದು, 114 ಪ್ರಕರಣಗಳು ಸಕ್ರಿಯವಾಗಿವೆ. ಸೋಂಕಿತರ ಪೈಕಿ 24 ಮಂದಿ ಕೋವಿಡ್ ಆಸ್ಪತ್ರೆಯಲ್ಲಿ, 27 ಮಂದಿ ಕೋವಿಡ್ ಕೇರ್ ಸೆಂಟರ್‍ನಲ್ಲಿ, 63 ಮಂದಿ ಹೋಮ್ ಐಸೋಲೇಷನ್‍ನಲ್ಲಿ ದಾಖಲಾಗಿದ್ದಾರೆ. ಜಿಲ್ಲೆಯಾದ್ಯಂತ 147 ನಿಯಂತ್ರಿತ ವಲಯಗಳಿವೆ.

ಜಿಲ್ಲೆಯಲ್ಲಿ ಕೋವಿಡ್ ಪರಿಸ್ಥಿತಿ ನಿಯಂತ್ರಣದಲ್ಲಿರುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ವಾರಪೂರ್ತಿ ಹೆಚ್ಚು ಮಾಡಲಾದ ಗಂಟಲು/ ಮೂಗು ದ್ರವ ಮಾದರಿಗಳ ಪರೀಕ್ಷೆ ಮತ್ತು ಸಂಪರ್ಕಗಳನ್ನು ಪತ್ತೆಹಚ್ಚುವಲ್ಲಿ ಸುಧಾರಣೆಗಳನ್ನು ತಂದ ಪರಿಣಾಮ ಪಾಸಿಟಿವ್ ಪ್ರಕರಣ ಮತ್ತು ಅವರ ಸಂಪರ್ಕಿತರನ್ನು ಬೇಗನೇ ಪತ್ತೆಹಚ್ಚಿ ಸಂಪರ್ಕ ತಡೆಯಲ್ಲಿಡಲು ಸಾಧ್ಯವಾಗಿದೆ.

ಈ ಎಲ್ಲಾ ಕ್ರಮಗಳಿಂದಾಗಿ ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ ಸಾವಿನ ಪ್ರಮಾಣವು ಗಣನೀಯವಾಗಿ ಕಡಿಮೆಯಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.