ಸಿದ್ದಾಪುರ, ನ. 4: ಎಐಟಿಯುಸಿ ಜಿಲ್ಲಾ ಕಚೇರಿಯಲ್ಲಿ ಸಂಘಟನೆಯ ಶತಮಾನೋತ್ಸವ ಆಚರಣೆ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಕೀಲ ಕೆ.ವಿ. ಸುನಿಲ್ 1920 ರಂದು ಮಹಾರಾಷ್ಟ್ರದ ಮುಂಬಯಿಯಲ್ಲಿ ಪ್ರಾರಂಭಿಸಿದ ಸಂಘಟನೆಯಾಗಿದೆ. ಲಾಲಾ ಲಜಪತ ರಾಯ್ ಮೊದಲ ಅಧ್ಯಕ್ಷರಾಗಿ ಕಾರ್ಮಿಕರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಏಕೈಕ ಸಂಘಟನೆ ಇದಾಗಿದೆ ಎಂದರು
ಸತತ ನೂರು ವರ್ಷಗಳಿಂದ ಕಾರ್ಮಿಕರ ಪರವಾಗಿ ಹೋರಾಟ ರೂಪಿಸಿದರ ಭಾಗವಾಗಿ ಹಲವು ಸವಲತ್ತುಗಳನ್ನು ಕೊಡಿಸುವಲ್ಲಿ ಯಶಸ್ವಿಯಾಗಿದೆ. ಕಾರ್ಮಿಕರು ಎಐಟಿಯುಸಿಯನ್ನು ಬಲಪಡಿಸುವಂತೆ ಕಿವಿಮಾತು ಹೇಳಿದರು.
ಎಐಟಿಯುಸಿ ಜಿಲ್ಲಾ ಉಪಾಧ್ಯಕ್ಷ ಎನ್. ಮಣಿ, ಕುಮಾರ್, ರಮೇಶ್ ಮಾಯಮುಡಿ, ಎಐವೈಫ್ ಜಿಲ್ಲಾಧ್ಯಕ್ಷ ರಫೀಕ್, ಗಣೇಶ್ ರಾಬಿನ್, ಸೀತಾರಾಮ್ ಎಐಟಿಯುಸಿ, ಕಟ್ಟಡ ಕಾರ್ಮಿಕರ ಸಂಘಟನೆಯ ಕೃಷ್ಣ ಕರಡಿಗೋಡು, ಪುಷ್ಪಾಮಣಿ, ಕುಮಾರಿ ಪೂಜಾ ಸೇರಿದಂತೆ ಹಲವರು ಹಾಜರಿದ್ದರು.