ಮಡಿಕೇರಿ, ನ. 4: ಗುರುಕುಲ ಕಲಾ ಪ್ರತಿಷ್ಠಾನದ ಕೊಡಗು ಜಿಲ್ಲಾ ಘಟಕದ ವತಿಯಿಂದ ರಾಜ್ಯೋತ್ಸವದ ಪ್ರಯುಕ್ತ ಕವನ ದತ್ತ ಪದ ಕರುನಾಡು ರಚನೆಯ ಸ್ಪರ್ಧೆ ರಾಜ್ಯಮಟ್ಟದಲ್ಲಿ ನಡೆಯಿತು. ಸುಮಾರು 70 ಕವನಗಳು ಸ್ಪರ್ಧೆಗಾಗಿ ಬಂದಿದ್ದವು. ಮೊದಲ ಮೂರು ಪುಸ್ತಕ ಬಹುಮಾನ ಹಾಗೂ ಎಲ್ಲಾ ಸ್ಪರ್ಧಿಗಳಿಗೂ ಅಭಿನಂದನಾ ಪತ್ರ ಆನ್‍ಲೈನ್ ಮೂಲಕ ನೀಡಿ ಗೌರವಿಸಲಾಯಿತು.

ಹತ್ತಿ ಬೆಳಗಲ್ ನಾಗರಾಜ ರಾವ್ (ಬಳ್ಳಾರಿ), ಮಮತ ಶ್ರೀಧರ್ (ಮೈಸೂರು), ಕಲಾವತಿ ಕೋಬಾಳ (ಕಲಬುರ್ಗಿ) ಇವರುಗಳು ಪುಸ್ತಕ ಬಹುಮಾನಕ್ಕೆ ಭಾಜನರಾದರು. ತೀರ್ಪುಗಾರರಾಗಿ ಚತುರ್ಭಾಷಾ ಸಾಹಿತಿ ಉಳುವಂಗಡ ಕಾವೇರಿ ಉದಯ ಹಾಗೂ ಲೇಖಕಿ ಹೆಚ್.ಜಿ. ಸಾವಿತ್ರಿ ಇವರುಗಳು ನಿರ್ವಹಿಸಿದರು ಎಂದು ಗುರುಕುಲ ಕೊಡಗು ಘಟಕದ ಜಿಲ್ಲಾಧ್ಯಕ್ಷೆ ಶೋಭಾ ರಕ್ಷಿತ್ ಕೆಂಚೆಟ್ಟಿ ಅವರು ತಿಳಿಸಿದ್ದಾರೆ.