ಗೋಣಿಕೊಪ್ಪ ವರದಿ, ನ. 4: ಕನ್ನಡ ರಾಜ್ಯೋತ್ಸವ ಪ್ರಯುಕ್ತ ವೀರಾಜಪೇಟೆ ತಾಲೂಕು ಒಕ್ಕಲಿಗರ ಯುವ ವೇದಿಕೆಯ ವತಿಯಿಂದ ಶಟಲ್ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಸಿಂಗಲ್ಸ್‍ನಲ್ಲಿ ವಿ. ಡಿ. ಕೀರ್ತನ್, ಮಹಿಳೆಯರಲ್ಲಿ ಅಂಜಲಿ ಕಲ್ಪೇಶ್ ಪ್ರಥಮ ಸ್ಥಾನ ಗಿಟ್ಟಿಸಿಕೊಂಡರು.

ಬಿಟ್ಟಂಗಾಲದ ತಂಗಾಳಿ ಒಳಾಂಗಣ ಕ್ರೀಡಾಂಗಣದಲ್ಲಿ ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ನಡೆದ ಸಿಂಗಲ್ಸ್, ಡಬಲ್ಸ್ ಸ್ಪರ್ಧೆಯಲ್ಲಿ ಉತ್ತಮ ಆಟ ಪ್ರದರ್ಶನಗೊಂಡಿತು.

ವಿಜೇತರು : ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಚೆನ್ನಂಗಿ ಗ್ರಾಮದ ವಿ. ಡಿ. ಕೀರ್ತನ್ ಪ್ರಥಮ, ಕೋಟೆಕೊಪ್ಪದ ವಿ.ಎಸ್ ಪ್ರಸನ್ನ ದ್ವಿತೀಯ, ಮಹಿಳೆಯರಲ್ಲಿ ಕಣ್ಣಂಗಾಲದ ಅಂಜಲಿ ಕಲ್ಪೇಶ್ ಪ್ರಥಮ, ಚೆನ್ನಂಗಿ ಗ್ರಾಮದ ಪ್ರಜ್ವಲ ದ್ವಿತೀಯ ಸ್ಥಾನ ಪಡೆದುಕೊಂಡರು.

ಪುರುಷರ ಡಬಲ್ಸ್ ವಿಭಾಗದಲ್ಲಿ ಕೋಟೆಕೊಪ್ಪದ ಯುವ ಪ್ರತಿಭೆಗಳಾದ ಆದರ್ಶ್-ವಿಕಾಸ್ ಜೋಡಿ ಪ್ರಥಮ, ಕಾರ್ಮಾಡ್ ಗ್ರಾಮದ ಹರೀಶ್ ಸಿದ್ದಯ್ಯ - ಅರ್ಜುನ್ ಸುಬ್ಬಣ್ಣ ಜೋಡಿ ದ್ವಿತೀಯ ಸ್ಥಾನ ಪಡೆದುಕೊಂಡರು. ಟೂರ್ನಿಯಲ್ಲಿ ಡಬಲ್ಸ್ ಮತ್ತು ಸಿಂಗಲ್ಸ್ ವಿಭಾಗದಲ್ಲಿ ಅದ್ಭುತ ಆಟ ಪ್ರದರ್ಶಿಸಿದ ಚೆನ್ನಂಗಿ ಗ್ರಾಮದ ಡಾಲು ಸರಣಿ ಪುರುಷ ಬಹುಮಾನ ಪಡೆದುಕೊಂಡರು.

ನಗದು ಮತ್ತು ಟ್ರೋಫಿ ದಾನಿಗಳಾದ ವಿ.ಡಿ. ನಿತಿನ್, ಕೆ.ಪಿ. ಅಜಿತ್, ವಿ.ಎನ್. ಕಾರ್ತಿಕ್ ಮತ್ತು ವಿ.ಡಿ. ಅಕ್ಷತ್, ಎನ್.ಮಂಜುನಾಥ್, ವಿ.ಸಿ. ಗಣೇಶ್, ಲೋಹಿತ್ ಗೌಡ, ಕೈಕೇರಿ ಒಕ್ಕಲಿಗರ ಯೂತ್‍ಕ್ಲಬ್, ಪದಾಧಿಕಾರಿಗಳನ್ನು ಅಭಿನಂದಿಸ ಲಾಯಿತು. ಬಹುಮಾನ ವಿತರಿಸಿ ತಾಲೂಕು ಅಧ್ಯಕ್ಷ ವಿ.ಪಿ. ಲೋಹಿತ್ ಗೌಡ ಮಾತನಾಡಿ, ಸಮುದಾಯದ ಒಗ್ಗೂಡುವಿಕೆಗೆ ಕ್ರೀಡೆ ಸಹಕಾರಿ ಯಾಗುತ್ತಿದೆ ಎಂದರು. ವಿವೈಸಿ ಕ್ಲಬ್ ಅಧ್ಯಕ್ಷ ಭರತ್, ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಖಜಾಂಚಿ ಪವನ್ ಕುಮಾರ್, ನಿರ್ದೇಶಕರಾದ ಅಜಿತ್ ಸುದೀಪ್, ರಮ್ಯ ವೇಣು ಕುಮಾರ್, ಕಾರ್ತಿಕ್ ಉಪಸ್ಥಿತರಿದ್ದರು.